ಬೆಳ್ತಂಗಡಿ, ಡಿಸೆಂಬರ್ 08, 2023 (ಕರಾವಳಿ ಟೈಮ್ಸ್) : ಚಾಲ್ತಿಯಲ್ಲೇ ಇಲ್ಲದ ಸಂಸ್ತೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ಮೋಸ ಮಾಡುತ್ತಿದ್ದ ಇಬ್ಬರು ಯುವಕರ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ತಾಲೂಕು, ನಿಡ್ಲೆ ಗ್ರಾಮದ ನಿವಾಸಿ ಧನುಷ್ (24) ಎಂಬವರು ಠಾಣೆಗೆ ದೂರು ನೀಡಿದ್ದು, ಗುರುವಾರ ಸಂಜೆ ನಿಡ್ಲೆ ಗ್ರಾಮದ ಪರಾಂಡ ಎಂಬಲ್ಲಿ ತಮ್ಮ ಮನೆಯಲ್ಲಿರುವಾಗ, ಇಬ್ಬರು ಯುವಕರು ಬಂದು ನಾವು ಬೆಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ಸೋಷಿಯಲ್ ಸರ್ವಿಸ್ ಟ್ರಸ್ಟ್ (ರಿ) ಎಂಬ ಸಂಸ್ಥೆಯ ವತಿಯಿಂದ ದೇಣಿಗೆ ಸಂಗ್ರಹಣೆಗೆ ಬಂದಿರುವುದಾಗಿ ತಿಳಿಸಿ ದೇಣಿಗೆ ನೀಡುವಂತೆ ಕೇಳಿದ್ದಾರೆ. ಆದರೆ ಯುವಕರ ವರ್ತನೆ ಬಗ್ಗೆ ಸಂಶಯಗೊಂಡ ಧನುಷ್ ಅವರು ಅವರಲ್ಲಿದ್ದ ಸಂಸ್ಥೆಯದ್ದೆಂದು ಹೇಳಲಾದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ನಾವು ಯಾರನ್ನೂ ಕಳುಹಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.
ಚಾಲ್ತಿಯಲ್ಲಿ ಇಲ್ಲದೇ ಇರುವ ಸಂಸ್ಥೆಯ ಹೆಸರಿನಲ್ಲಿ ಹಣ ಸಂಗ್ರಹಣೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದಾಗಿ ಆರೋಪಿತರ ಮೇಲೆ ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧಕ ಕ್ರಮಾಂಕ 99/2023 ಕಲಂ 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment