ಬಂಟ್ವಾಳ, ಡಿಸೆಂಬರ್ 23, 2023 (ಕರಾವಳಿ ಟೈಮ್ಸ್) : ಕಲ್ಲಡ್ಕ ಸಮೀಪದ ಬೋಳಂಗಡಿ ನರಹರಿ ಪರ್ವತ ಬಳಿಯ ತಿರುವಿನಲ್ಲಿ ಲಾರಿಗಳೆರಡು ಮುಖಾಮುಖಿ ಡಿಕ್ಕಿಯಾಗಿ ಓರ್ವ ಚಾಲಕ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಮಂಗಳೂರಿನಿಂದ ಕಲ್ಲಿದ್ದಲು ಹೇರಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಲಾರಿ ಹಾಗೂ ಎದುರಿನಿಂದ ಬರುತ್ತಿದ್ದ ಟ್ರಾನ್ಸ್ ಪೆÇೀರ್ಟ್ ಸಂಸ್ಥೆಯ ಲಾರಿಗಳ ನಡುವೆ ಈ ಮುಖಾಮುಖಿ ಅಪಘಾತ ಸಂಭವಿಸಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಲಾರಿ ಚಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯಿಂದ ಲಾರಿಗಳೆರಡರ ಆಯಿಲ್ ಟ್ಯಾಂಕ್ ಹಾನಿಗೊಂಡು ತೈಲ ರಸ್ತೆಯಲ್ಲಿ ಹರಿದು ಕೆಲ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ನೀರು ಹಾಯಿಸಿ ರಸ್ತೆಯಲ್ಲಿ ಚೆಲ್ಲಿದ್ದ ತೈಲವನ್ನು ಶುಚಿಗೊಳಿಸಿದರು. ಬಂಟ್ವಾಳ ಟ್ರಾಫಿಕ್ ಪೆÇಲೀಸರು ಟ್ರಾಫಿಕ್ ನಿಯಂತ್ರಿಸಿದರು. ಬಳಿಕ ಕ್ರೇನ್ ಬಳಸಿ ಅಪಘಾತಕ್ಕೊಳಗಾದ ಲಾರಿಗಳನ್ನು ಸ್ಥಳದಿಂದ ತೆರವುಗೊಳಿಸಲಾಯಿತು.
0 comments:
Post a Comment