ಬೆಳ್ತಂಗಡಿ, ಡಿಸೆಂಬರ್ 07, 2023 (ಕರಾವಳಿ ಟೈಮ್ಸ್) : ಗ್ಯಾರೇಜಿನಲ್ಲಿರುವ ವೇಳೆ ಕಾರಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ಸಾವಿರಾರು ರೂಪಾಯಿ ನಗದು ಹಾಗೂ ಮಕ್ಕಳ ಬಟ್ಟೆಗಳಿದ್ದ ಬ್ಯಾಗ್ ಕಳವುಗೈದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಜಂಕ್ಷನ್ ಬಳಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ನಿವಾಸಿ ಅಬ್ದುಲ್ ಜಲೀಲ್ ಸೋಮವಾರ ಕಾರಿನಲ್ಲಿ ತನ್ನ ಪತ್ನಿ, 4 ಮಂದಿ ಮಕ್ಕಳು ಹಾಗೂ ಸಹೋದರಿ ಜೊತೆ ಪ್ರಯಾಣಿಸಿ ಲಾಯಿಲ ಜಂಕ್ಷನ್ ಬಳಿ ಗ್ಯಾರೇಜಿನಲ್ಲಿರುವಾಗ ಕಾರಿನಲ್ಲಿದ್ದ 3 ಲಕ್ಷದ 34 ಸಾವಿರದ 400 ರೂಪಾಯಿ ಮೌಲ್ಯದ 88 ಗ್ರಾಂ ಚಿನ್ನಾಭರಣ, 1500/- ರೂಪಾಯಿ ನಗದು ಹಾಗೂ ಮಕ್ಕಳ ಬಟ್ಟೆಗಳಿದ್ದ ಬ್ಯಾಗನ್ನು ಕಳ್ಳರು ಎಗರಿಸಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 117/2023 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡು ಕಳ್ಳರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
0 comments:
Post a Comment