ಬಂಟ್ವಾಳ, ಡಿಸೆಂಬರ್ 30, 2023 (ಕರಾವಳಿ ಟೈಮ್ಸ್) : ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಹಸವಾರ ದಾರುಣವಾಗಿ ಮೃತಪಟ್ಟು, ಸವಾರ ಗಾಯಗೊಂಡ ಘಟನೆ ಬಿ ಸಿ ರೋಡು ಪೇಟೆಯ ಸೋಮಯಾಜಿ ಆಸ್ಪತ್ರೆ ಮುಂಭಾಗ ಶುಕ್ರವಾರ ತಡ ರಾತ್ರಿ ವೇಳೆ ನಡೆದಿದೆ.
ಮೃತ ಸಹಸವಾರನನ್ನು ಮಂಗಳೂರು ಬೆಂಗ್ರೆ ನಿವಾಸಿ ಮೊಯಿದಿನ್ ರಮೀಝ್ (20) ಎಂದು ಗುರುತಿಸಲಾಗಿದೆ. ಸವಾರ ಸಜ್ಜಾದ್ ಅವರಿಗೂ ಗಾಯಗಳಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಇಬ್ಬರು ಸ್ನೇಹಿತರು ಬೈಕಿನಲ್ಲಿ ಶುಕ್ರವಾರ ರಾತ್ರಿ ಅಜಿಲಮೊಗರು ಉರೂಸ್ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದರು ಎನ್ನಲಾಗಿದ್ದು, ಬಿ ಸಿ ರೋಡು ಪೇಟೆಯಲ್ಲಿ ಲಾರಿ ಚಾಲನ ದುಡುಕುತನದ ಸಂಚಾರದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಿಂದ ರಸ್ತೆಗೆಸೆಯಲ್ಪಟ್ಟ ರಮೀಝ್ ಅವರ ತಲೆ ಮೇಲೆ ಲಾರಿ ಹರಿದ ಪರಿಣಾಮ ಆತ ಗಂಭೀರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಆತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸವಾರ ಸಜ್ಜಾದ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ಬಿ ಮೂಡ ಗ್ರಾಮದ ನಿವಾಸಿ ಅಬ್ದುಲ್ ಸಮದ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 177/2023 ಕಲಂ 279, 337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment