ಬಂಟ್ವಾಳ, ಡಿಸೆಂಬರ್ 30, 2023 (ಕರಾವಳಿ ಟೈಮ್ಸ್) : ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಬೆಂಗಳೂರು ಇದರ ವತಿಯಿಂದ ಹಮ್ಮಿಕೊಳ್ಳಲಾದ ಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪಿಂಚಣಿ ಕುಂದು ಕೊರತೆಗಳನ್ನು ನೋಂದಾಯಿಸಲು ಮತ್ತು ಪಿಂಚಣಿ ಕುರಿತಾದ ಮಾಹಿತಿ ನೀಡಲು ಬಂಟ್ವಾಳ ತಾಲೂಕು ಕಂದಾಯ ಇಲಾಖೆಯಿಂದ “ಪಿಂಚಣಿ ದಿನ” ಆಚರಣೆಯು ಗೋಳ್ತಮಜಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಮಾತನಾಡಿ, ಇಂತಹ ಯೋಜನೆಗಳಿಂದ ಬಡವರಾದ ಅಸಹಾಯಕ ವ್ಯಕ್ತಿಗಳಿಗೆ ಬಹಳಷ್ಟು ನೆರವು ದೊರೆಯುತ್ತದೆ. ಅಧಿಕಾರಿಗಳೇ ಫಲಾನುಭವಿಗಳ ಬಳಿಗೆ ಬಂದು ಪಿಂಚಣಿ ದಿನಾಚರಣೆಯನ್ನು ಆಚರಿಸುವುದು ಬಹಳ ಅರ್ಥಪೂರ್ಣವಾಗಿದೆ. ಇದರಿಂದ ಸರಕಾರದ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗುತ್ತದೆ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಗೌಡ ಮಕ್ಕಾರು, ಕಂದಾಯ ಇಲಾಖೆಯ ಉಪತಹಶೀಲ್ದಾರ್ ದಿವಾಕರ ಮುಗುಳಿಯ, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ವಿಜಯ್ ಆರ್, ಗ್ರಾಮ ಆಡಳಿತ ಅಧಿಕಾರಿ ಶಿಲ್ಪಾ ಜನಾರ್ದನ್, ತಾಲೂಕು ಕಚೇರಿ ಸಿಬ್ಬಂದಿ ವೆಂಕಟರಮಣ, ಗ್ರಾಮ ಸಹಾಯಕರಾದ ಮೋಹನ್ ದಾಸ್ ಕೊಟ್ಟಾರಿ, ಸಂಜೀವ ಮಂಚಿ, ಸದಾನಂದ ಪುದು, ವಿಠಲ ಬಡಗಬೆಳ್ಳೂರು ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯ ಶಂಕರ್ ಆಳ್ವ ಸ್ವಾಗತಿಸಿ, ವಂದಿಸಿದರು. ಫಲಾನುಭವಿಗಳು ಅದಾಲತಿನ ಸದುಪಯೋಗ ಪಡೆದರು.
0 comments:
Post a Comment