ಬಿ.ಸಿ.ರೋಡಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ ಸಭೆ : ವಿದ್ಯಾರ್ಥಿ ಚಳುವಳಿ ಬಲಿಷ್ಠಗೊಳಿಸಲು ಕರೆ - Karavali Times ಬಿ.ಸಿ.ರೋಡಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ ಸಭೆ : ವಿದ್ಯಾರ್ಥಿ ಚಳುವಳಿ ಬಲಿಷ್ಠಗೊಳಿಸಲು ಕರೆ - Karavali Times

728x90

23 December 2023

ಬಿ.ಸಿ.ರೋಡಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ ಸಭೆ : ವಿದ್ಯಾರ್ಥಿ ಚಳುವಳಿ ಬಲಿಷ್ಠಗೊಳಿಸಲು ಕರೆ

ಬಂಟ್ವಾಳ, ಡಿಸೆಂಬರ್ 24, 2023 (ಕರಾವಳಿ ಟೈಮ್ಸ್) : ಅಖಿಲ ಭಾರತ ವಿದ್ಯಾರ್ಥಿ ಸಂಘ (ಎ.ಐ.ಎಸ್.ಎ) ಇದರ ಸಭೆಯು ಶನಿವಾರ ಬಿ ಸಿ ರೋಡಿನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಘಟನೆಯ ರಾಜ್ಯ ಮುಖಂಡರಾದ ಲೇಖಾ ಅವರು ಮಾತನಾಡಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎ.ಐ.ಎಸ್.ಎ) ಸಂಘಟನೆಯು ಒಂದು ಕ್ರಾಂತಿಕಾರಿ ವಿಧ್ಯಾರ್ಥಿ ಸಂಘಟನೆಯಾಗಿದ್ದು, ಶಿಕ್ಷಣದ ಹಕ್ಕಿಗಾಗಿ ದೇಶದಾದ್ಯಂತ ಹೋರಾಟಗಳನ್ನು ನಡೆಸುತ್ತಿದೆ. ಇಂದಿನ ಸರಕಾರಗಳ ಶೈಕ್ಷಣಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟಗಳನ್ನು ಬಲಿಷ್ಠಗೊಳಿಸಲು ಸಂಘಟನೆಯನ್ನು ಬಲಗೊಳಿಸಬೇಕೆಂದು ಕರೆ ನೀಡಿದರು.
ಸಂಘಟನೆಯ ರಾಜ್ಯ ಸಮ್ಮೇಳನವು ಜನವರಿ 28 ರಂದು ಗಂಗಾವತಿಯಲ್ಲಿ ನಡೆಯಲಿದೆ. ಇದರಲ್ಲಿ ರಾಜ್ಯದಾದ್ಯಂತ ವಿದ್ಯಾರ್ಥಿ ಚಳುವಳಿಯನ್ನು ಕಟ್ಟುವ ಬಗ್ಗೆ ಚರ್ಚೆ ನಡೆಯಲಿದೆ ಎಂದವರು ಇದೇ ವೇಳೆ ತಿಳಿಸಿದ ಅವರು ಲೋಕಸಭಾ ಚುನಾವಣೆಗೆ ಯುವ ಭಾರತ ಸನ್ನದ್ದು-2024 ಎನ್ನುವ ಹೆಸರಿನಲ್ಲಿ ವಿವಿಧ ಬೇಡಿಕೆಯನ್ನು ಮುಂದಿಟ್ಟು ಸಹಿ ಸಂಗ್ರಹ ಅಭಿಯಾನವನ್ನು ನಡೆಸಲಾಗುತ್ತಿದೆ. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಸಿ ಪಿ ಐ ಎಂ ಎಲ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ನ್ಯಾಯವಾದಿ ತುಳಸೀದಾಸ್ ವಿಟ್ಲ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ ಸಭೆ : ವಿದ್ಯಾರ್ಥಿ ಚಳುವಳಿ ಬಲಿಷ್ಠಗೊಳಿಸಲು ಕರೆ Rating: 5 Reviewed By: karavali Times
Scroll to Top