ಬೆಳ್ತಂಗಡಿ, ಡಿಸೆಂಬರ್ 24, 2023 (ಕರಾವಳಿ ಟೈಮ್ಸ್) : ಎರಡು ಕಾರುಗಳ ನಡುವೆ ಅಪಘಾತ ನಡೆದು 9 ಮಂದಿ ಗಾಯಗೊಂಡ ಘಟನೆ ಪುದುವೆಟ್ಟು ಗ್ರಾಮದ ಪಡ್ಪಿತ್ತಿಲು ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಘಟನೆಯಿಂದ ಒಂದು ಕಾರಿನಲ್ಲಿದ್ದ ಚಾಲಕಿ ಪೂರ್ಣಿಮಾ (38) ಅವರ ಪುತ್ರಿ ಮಾನ್ಯ, ಪುತ್ರ ವೈಭವ್, ತಾಯಿ ಪುಷ್ಪಾವತಿ ಅವರು ಗಾಯಗೊಂಡರೆ, ಇನ್ನೊಂದು ಕಾರಿನಲ್ಲಿದ್ದ ಪ್ರಯಾಣಿಕರಾದ ದೀಕ್ಷಿತ್, ಲತಾ, ಸುಕುಮಾರನ್, ಸಂಜನ ಹಾಗೂ ಮೀನಾಕ್ಷಿ ಅವರು ಗಾಯಗೊಂಡಿದ್ದಾರೆ. ಸದ್ರಿ ಕಾರು ಚಾಲಕ ರಮೇಶ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಗಾಯಾಳುಗಳನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment