ಬಂಟ್ವಾಳ, ನವೆಂಬರ್ 26, 2023 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 305/2016 ಕಲಂ 454, 380 IPC ಪ್ರಕರಣದಲ್ಲಿ ಆರೋಪಿಯಾಗಿದ್ದು, ನ್ಯಾಯಾಲಕ್ಕೆ ಹಾಜರಾಗದೆ ವಾರಂಟ್ ಜಾರಿಯಾದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು, ಉಪ್ಪಳ-ಹಿರೋಗಳ್ಳಿ ನಿವಾಸಿ ಜಂಶೀರ್ @ ಜಂಸೀದ್ @ ಜೆಮ್ಮಿ (27) ಎಂಬಾತನನ್ನು ವಿಟ್ಲ ಪೊಲೀಸರು ಶನಿವಾರ (ನ 25) ಉಪ್ಪಳದಿಂದ ದಸ್ತಗಿರಿ ಮಾಡುವಲ್ಲಿ ಯಶಸ್ಬಿಯಾಗಿದ್ದಾರೆ.
ವಿಟ್ಲ ಠಾಣಾ ASI ಜಯರಾಮ ಮತ್ತು ಸಿಬ್ಬಂದಿಗಳಾದ ವಿಶ್ವನಾಥ, ಯಂಕಪ್ಪ ಹಾಗೂ ಅಶೋಕ ಅವರು ಆರೋಪಿ ಬಂಧನ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
0 comments:
Post a Comment