ಉಡುಪಿ, ನವೆಂಬರ್ 15, 2023 (ಕರಾವಳಿ ಟೈಮ್ಸ್) : ಉಡುಪಿಯ ನೇಜಾರಿನಲ್ಲಿ ನವೆಂಬರ್ 12 ರಂದು ಭಾನುವಾರ ನಡೆದ ತಾಯಿ ಹಾಗೂ ಮೂವರು ಮಕ್ಕಳ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಆರೋಪಿ ಪ್ರವೀಣ್ ಅರುಣ್ ಚೌಗಲೆ (39) ಎಂಬಾತನನ್ನು ಬುಧವಾರ ಸಂಜೆ ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ್ ಅವರು ಆರೋಪಿಯನ್ನು 14 ದಿನಗಳ ಕಾಲ ಅಂದರೆ ನವೆಂಬರ್ 28ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ಪ್ರಕರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಉಡುಪಿ ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಅವರು ಪ್ರವೀಣ್ ಚೌಗುಲೆ ಕುಟುಂಬದ ಕೊಲೆ ನಡೆಸಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಕೊಲೆಗೆ ಯಾವೆಲ್ಲಾ ಕಾರಣ ಇದೆ ಎಂಬ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬರಲಿದೆ. ಪೂರ್ಣ ತನಿಖೆ ಕೈಗೊಳ್ಳದೆ ಯಾವುದೇ ಹೇಳಲು ಸಾಧ್ಯವಿಲ್ಲ ಎಂದರು.
ಅಯ್ನಾಝ್ ಎಂಬಾಕೆಯನ್ನು ಕೊಲೆ ಮಾಡುವುದು ಆತನ ಉದ್ದೇಶವಾಗಿತ್ತು. ಬಳಿಕ ಸಾಕ್ಷಿ ದೊರೆಯದಂತೆ ಮಾಡಲು ಉಳಿದ ಮೂವರ ಕೊಲೆ ಮಾಡಿರುವ ಬಗ್ಗೆ ಆರೋಪಿ ತಪೆÇ್ಪಪ್ಪಿಕೊಂಡಿದ್ದಾನೆ. ಆರೋಪಿ ಪ್ರವೀಣ್ ಚೌಗುಲೆ ವಿವಾಹಿತನಾಗಿದ್ದು, ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಿ ಆತನನ್ನು ಬಂಧಿಸಿದ್ದೇವೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೆ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಎಸ್ಪಿ ಹೇಳಿದರು.
0 comments:
Post a Comment