ಬಂಟ್ವಾಳ, ನವೆಂಬರ್ 25, 2023 (ಕರಾವಳಿ ಟೈಮ್ಸ್) : ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಅಂಗಡಿಗೆ ಹೋಗಿ ಸಾಮಾನು ಖರೀದಿಸಿ ಬರುವಷ್ಟರಲ್ಲಿ ಸ್ಕೂಟರ್ ಕಳವಾದ ಘಟನೆ ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ನಡೆದಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಳ್ತಿಲ ಗ್ರಾಮದ ನಿವಾಸಿ ರಂಜಿನಿ ಎಸ್ ಅವರು ನ 22 ರಂದು ಮಧ್ಯಾಹ್ನ ತನ್ನ ಆಕ್ಸೆಸ್ ದ್ವಿಚಕ್ರ ವಾಹನವನ್ನು ದಾಸಕೋಡಿ ಎಂಬಲ್ಲಿ ರಸ್ತೆ ಬದಿ ನಿಲ್ಲಿಸಿ, ಅಂಗಡಿಗೆ ಸಾಮಾನು ತರಲೆಂದು ಹೋಗಿ ವಾಪಾಸ್ಸು ಬಂದು ನೋಡಿದಾಗ ಸದ್ರಿ ಸ್ಥಳದಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನ ಕಳವಾಗಿರುವುದು ಬೆಳಕಿಗೆ ಬಂದಿದೆ. ಪರಿಸರದಲ್ಲಿ ಹುಡುಕಾಡಿದರೂ ದ್ವಿಚಕ್ರ ವಾಹನ ಪತ್ತೆಯಾದಿರುವ ಹಿನ್ನಲೆಯಲ್ಲಿ ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment