ಬಂಟ್ವಾಳ ಕುಲಾಲ ಸುಧಾಕರ ಸಂಘದ ವತಿಯಿಂದ ತುಡರ್ ಪರ್ಬದ ಐಸಿರ-2023 ಸಾಮೂಹಿಕ ದೀಪಾವಳಿ ಕಾರ್ಯಕ್ರಮ - Karavali Times ಬಂಟ್ವಾಳ ಕುಲಾಲ ಸುಧಾಕರ ಸಂಘದ ವತಿಯಿಂದ ತುಡರ್ ಪರ್ಬದ ಐಸಿರ-2023 ಸಾಮೂಹಿಕ ದೀಪಾವಳಿ ಕಾರ್ಯಕ್ರಮ - Karavali Times

728x90

21 November 2023

ಬಂಟ್ವಾಳ ಕುಲಾಲ ಸುಧಾಕರ ಸಂಘದ ವತಿಯಿಂದ ತುಡರ್ ಪರ್ಬದ ಐಸಿರ-2023 ಸಾಮೂಹಿಕ ದೀಪಾವಳಿ ಕಾರ್ಯಕ್ರಮ

ಬಂಟ್ವಾಳ, ನವೆಂಬರ್ 21, 2023 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳ ಮತ್ತು ಮಹಿಳಾ ಘಟಕದ ವತಿಯಿಂದ ತುಡರ್ ಪರ್ಬದ ಐಸಿರ 2023 ಗೂಡುದೀಪ ಸ್ಪರ್ಧೆ ಮತ್ತು ಅವಲಕ್ಕಿ ತಯಾರಿ ಸ್ಪರ್ಧೆಯು ಭಾನುವಾರ (ನ 19) ಬಿ ಸಿ ರೋಡಿನ ಪೆÇಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಶೇಖರ್ ಬಿ, ಬಂಟ್ವಾಳ ತಾಲೂಕು ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಭಾಗವಹಿಸಿದ್ದರು. ಬಂಟ್ವಾಳ ತಾಲೂಕು ಕುಲಾಲ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ, ಸೇವಾದಳಪತಿ ರಾಜೇಶ್ ಕುಮಾರ್, ಗಣೇಶ್ ಕುಲಾಲ್ ಬೆದ್ರಗುಡ್ಡೆ, ದರ್ಶನ್ ಮೊಡಂಕಾಪು, ಯಾದವ ಅಗ್ರಬೈಲು, ತಾರನಾಥ ಮೊಡಂಕಾಪು, ಗಣೇಶ್ ಕುಲಾಲ್ ಮೊಡಂಕಾಪು, ಪ್ರೇಮನಾಥ ನೇರಂಬೋಳು ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ದೀಪಾವಳಿ ಸಂದರ್ಭ ನಡೆದ ಫೆÇೀಟೋ ಸ್ಪರ್ಧೆಯ ಬಹುಮಾನ ವಿತರಣೆ, ಮಕ್ಕಳಿಂದ ಕುಣಿತ, ಭಜನೆ, ಮಹಿಳೆಯರಿಂದ ಭಜನೆ, ಗೂಡುದೀಪ ಸ್ಪರ್ಧೆ, ಅವಲಕ್ಕಿ ತಯಾರಿ ಸ್ಪರ್ಧೆ ಮತ್ತು ಸಾಮೂಹಿಕ ದೀಪಾವಳಿ ಆಚರಣೆ ಕಾರ್ಯಕ್ರಮ ನಡೆಯಿತು.

ಸುಕನ್ಯ, ಮಿಥ್ವಿ, ವೈಷ್ಣವಿ, ಸಾನ್ವಿ ಮತ್ತು ಬಳಗ ಪ್ರಾರ್ಥನೆ ನೆರವೇರಿಸಿದರು. ಸೇವಾದಳದ ಸದಸ್ಯ ರಾಘವೇಂದ್ರ ಕಾಮಾಜೆ ಸ್ವಾಗತಿಸಿ, ದೇವದಾಸ ಅಗ್ರಬೈಲು ಪ್ರಸ್ತಾವನೆಗೈದರು. ಸಜೇಶ್ ಭಂಡಾರಿಬೆಟ್ಟು ವಂದಿಸಿದರು. ಕಾರ್ಯದರ್ಶಿ ಜಯಂತ ಅಗ್ರಬೈಲು ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಕುಲಾಲ ಸುಧಾಕರ ಸಂಘದ ವತಿಯಿಂದ ತುಡರ್ ಪರ್ಬದ ಐಸಿರ-2023 ಸಾಮೂಹಿಕ ದೀಪಾವಳಿ ಕಾರ್ಯಕ್ರಮ Rating: 5 Reviewed By: karavali Times
Scroll to Top