ಕೊಯಿಲ ಸರಕಾರಿ ಶಾಲೆಯಲ್ಲಿ ಬಂಟ್ವಾಳ ಎಸ್.ವಿ.ಎಸ್ ಪ.ಪೂ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಮಾರೋಪ
ಬಂಟ್ವಾಳ, ನವೆಂಬರ್ 04, 2023 (ಕರಾವಳಿ ಟೈಮ್ಸ್) : ಭಾರತ ವಿಭಿನ್ನ ಭಾಷೆ ಸಂಸ್ಕøತಿಯಿಂದ ಕೂಡಿದ ದೇಶವಾಗಿದ್ದು ಇಲ್ಲಿ ಎಲ್ಲರೂ ಒಂದಾಗಿ ಬಾಳುತ್ತಿದ್ದಾರೆ. ಎನ್ ಎಸ್ ಎಸ್ ನಂತಹ ಶಿಬಿರಗಳಲ್ಲಿ ಅಂತÀಹ ರಾಷ್ಟ್ರೀಯ ಮನೋಭಾವ ದೊರಕುತ್ತಿದ್ದು, ಸಾಮರಸ್ಯ ಜೀವನಕ್ಕೆ ಸಹಕಾರಿಯಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಕೊಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ಎಸ್ ವಿ ಎಸ್ ಪದವಿಪೂರ್ವ ಕಾಲೇಜಿನ ಎನ್ ಎಸ್ ಎಸ್ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯವಂತ ಮನೋಸ್ಥಿತಿಯು ಒಂದು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವಲ್ಲಿ ಸಹಕರಿಸುತ್ತದೆ ಎಂದರು.
ಪರಸ್ಪರ ಅಪನಂಬಿಕೆ ಜನಾಂಗೀಯ ಶೋಷಣೆಗೆ ಒಳಗಾಗದೆ ಯುವಜನತೆ ರಾಷ್ಟ್ರದ ಭಾವೈಕ್ಯತೆ, ಸಾರ್ವಭೌಮತೆಯನ್ನು ಉಳಿಸಿ ಬೆಳೆಸಬೇಕು. ಮಾನವ ಸಂಪನ್ಮೂಲದ ಸದ್ಭಳಕೆ ಸದೃಢಗೊಳಿಸುವ ಹೊಣೆಗಾರಿಕೆ ಯುವಪೀಳಿಗೆಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಾಮರಸ್ಯ, ಸಹಬಾಳ್ವೆ ವ್ಯಕ್ತಿತ್ವ ವಿಕಸನ ಅಗತ್ಯವಾಗಿ ನಡೆಯಬೇಕು. ವಿದ್ಯಾರ್ಥಿಗಳಲ್ಲಿ ಎಲ್ಲರೂ ಒಂದಾಗಿ ಬೆರೆಯುವ ಆ ಮೂಲಕ ಕೂಡು ಕುಟುಂಬದ ವಾತಾವರಣ ನಿರ್ಮಾಣವಾಗಬೇಕು. ಯುವ ಜನಾಂಗವು ರಾಷ್ಟ್ರೀಯ ಸೇವಾ ಯೋಜನೆಯಂತಹ ಸೇವಾ ಮನೋಭಾವದ ಶಿಬಿರಗಳಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಪ್ರಯತ್ನಿಸಬೇಕು ಎಂದವರು ಕರೆ ನೀಡಿದರು.
ಎಸ್ ವಿ ಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಜಗದೀಶ್ ಕೊೈಲ, ಲಯನ್ಸ್ ಕ್ಲಬ್ ಲೊರೆಟೋ-ಆಗ್ರಾರ್ ಅಧ್ಯಕ್ಷ ಫೆಲಿಕ್ಸ್ ಲೋಬೊ,, ಕಾರ್ಯದರ್ಶಿ ಆಶಾ ಫೆರ್ನಾಂಡಿಸ್, ಉದ್ಯಮಿಗಳಾದ ಪಿಯೂಸ್ ಎಲ್ ರೋಡ್ರಿಗಸ್, ಕೆ ಎಚ್ ಖಾದರ್ ಅರಳ, ಶಾಲಾ ಮುಖ್ಯೋಪಾಧ್ಯಾಯನಿ ಭಾರತಿ ಕಾರಂತ್, ಲಯನ್ಸ್ ಕ್ಲಬ್ ರಾಯಿ-ಸಿದ್ಧಕಟ್ಟೆ ಕಾರ್ಯದರ್ಶಿ ಅನಿಲ್ ಪ್ರಭು, ಎನ್ ಎಸ್ ಎಸ್ ಘಟಕ ನಾಯಕರಾದ ಪವನ್, ಕೀರ್ತನಾ, ಸಹ ಶಿಬಿರಾಧಿಕಾರಿಗಳಾದ ಭವಿತಾ ಕೆ, ರೂಪಾ, ಮುಸ್ತಾಫ, ಶಿಬಿರಾರ್ಥಿಗಳಾದ ಅಮಿತ್ ಪ್ರಭು, ಕಾರ್ತಿಕ್ ವೈ, ಯಜ್ಞ ಶೆಟ್ಟಿ ಮೊದಲಾದವರಿದ್ದರು.
ಶಿಬಿರಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಆಶಯ ಗೀತೆ ಹಾಡಿದರು. ಎಸ್ ವಿ ಎಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಲಕ್ಷ್ಮೀನಾರಾಯಣ ಕೆ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಶಶಿಧರ್ ಎಸ್ ವಂದಿಸಿದರು. ಕನ್ನಡ ಉಪನ್ಯಾಸಕ ಮನೋಹರ ಶಾಂತಪ್ಪ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment