ಬಂಟ್ವಾಳ, ನವೆಂಬರ್ 19, 2023 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಆಲಡ್ಕ, ನೆಹರುನಗರ ಹಾಗೂ ಗೂಡಿನಬಳಿ ಶಾಖೆಗಳ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳ ವೈವಿಧ್ಯ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮ “ಬಾಲ್ಯೋತ್ಸವ” ವಿದ್ಯಾರ್ಥಿ ಫೆಸ್ಟ್ ಸಮಾರಂಭವು ಭಾನುವಾರ (ನ 19) ಪಾಣೆಮಂಗಳೂರು-ಆಲಡ್ಕದ ಸಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಬಳಿ ನಡೆಯಿತು.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಆಲಡ್ಕ ಶಾಖಾಧ್ಯಕ್ಷ ಹನೀಫ್ ಹಾಸ್ಕೋ ಅಧ್ಯಕ್ಷತೆ ವಹಿಸಿದ್ದರು. ನೆಹರುನಗರ ಶಾಖಾಧ್ಯಕ್ಷ ಪಿ ಎಸ್ ಅಬ್ದುಲ್ ರಝಾಕ್, ಕಾರ್ಯದರ್ಶಿ ರಿಝ್ವಾನ್, ಗೂಡಿನಬಳಿ ಶಾಖಾಧ್ಯಕ್ಷ ಉಬೈದುಲ್ಲಾ ಹಾಜಿ, ಆಲಡ್ಕ ಶಾಖಾ ಇಬಾದ್ ಚೆಯರ್‍ಮೆನ್ ಖಲೀಲ್ ದಾರಿಮಿ, ಗೂಡಿನಬಳಿ ಮದ್ರಸ ಅಧ್ಯಾಪಕ ಅನ್ಸಾರ್ ಫೈಝಿ, ಗುಡ್ಡೆಂಗಡಿ ನೂರುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಉಸ್ತುವಾರಿ ಇಬ್ರಾಹಿಂ ಬಾತಿಷ್ ಶಂಶಿ ಕೊಡ್ಲಿಪೇಟೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಿದರು.
ನೆಹರುನಗರ ಶಾಖಾ ಉಪಾಧ್ಯಕ್ಷ ಅಬೂಸ್ವಾಲಿಹ್ ನೆಹರುನಗರ, ಕಾರ್ಯನಿರ್ವಾಹಕ ಕಾರ್ಯದರ್ಶಿ ಸುಹೈಲ್ ನೆಹರುನಗರ, ಸದಸ್ಯ ಮುಬಾರಕ್ ನೆಹರುನಗರ, ಆಲಡ್ಕ ಶಾಖಾ ಪದಾಧಿಕಾರಿಗಳಾದ ಮಜೀದ್ ಬೋಳಂಗಡಿ, ಬಶೀರ್ ಕೆ4, ಶಫೀಕ್ ಆಲಡ್ಕ, ರಫೀಕ್ ಇನೋಳಿ, ಅಬೂಬಕ್ಕರ್ ಎನ್ ಬಿ, ಸಲಾಂ ಸೆಂಟ್ರಿಂಗ್, ಮುಹಮ್ಮದ್ ಹನೀಫ್ ಫಿಶ್ ಬೋಗೋಡಿ, ಇಸಾಕ್ ಫ್ಯಾಶನ್ ವೇರ್, ಅಬ್ದುಲ್ ಅಝೀಝ್ ಆಲಡ್ಕ, ಝುಬೈರ್ ಉಪ್ಪುಗುಡ್ಡೆ, ಖಾದರ್ ಪೈಂಟರ್, ಶಾಫಿ ಹಾಜಿ ಬಂಗ್ಲೆಗುಡ್ಡೆ, ಮುಬಾರಕ್ ನೆಹರುನಗರ, ಇರ್ಶಾದ್ ಡ್ರೀಮ್ಸ್ ಗೂಡಿನಬಳಿ, ಹಾಗೂ ವಿವಿಧ ಶಾಖಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಇಬ್ರಾಹಿಂ ಬಾತಿಷ್ ಶಂಶಿ ಕೊಡ್ಲಿಪೇಟೆ, ವಿಖಾಯ ವಲಯ ಚೆಯರ್‍ಮೆನ್ ಗಳಾದ ರಿಝ್ವಾನ್ ನಂದಾವರ, ರಶೀದ್ ಅಗ್ರಹಾರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಬುರ್‍ದಾ ಹಾಗೂ ವಿವಿಧ ಪ್ರತಿಭಾ ಕಾರ್ಯಕ್ರಮಗಳು ನಡೆದು ಬಹುಮಾನ ವಿತರಿಸಲಾಯಿತು.
ಇದಕ್ಕೂ ಮೊದಲು ಅಕ್ಕರಂಗಡಿ ಜುಮಾ ಮಸೀದಿ ಬಳಿಯಿಂದ ವಿದ್ಯಾರ್ಥಿಗಳು ಡ್ರಗ್ಸ್ ವಿರೋಧಿ ಜಾಥಾ ಮೂಲಕ ಆಲಡ್ಕ ಕಾರ್ಯಕ್ರಮ ಸ್ಥಳಕ್ಕೆ ಸಾಗಿ ಬಂದರು. ಅಕ್ಕರಂಗಡಿ ಜುಮಾ ಮಸೀದಿ ಮುದರ್ರಿಸ್ ರಾಝಿ ಬಾಖವಿ ಎಸ್ಕೆಸ್ಸೆಸ್ಸೆಫ್ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಶಾಖಾ ಕಾರ್ಯದರ್ಶಿ ಬಶೀರ್ ನಂದಾವರ ಸ್ವಾಗತಿಸಿ, ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ಶಾಖಾ ಕಾರ್ಯದರ್ಶಿ ಸವಾದ್ ಗೂಡಿನಬಳಿ ವಂದಿಸಿದರು.
0 comments:
Post a Comment