ಡಿಸೆಂಬರ್ 7 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ - Karavali Times ಡಿಸೆಂಬರ್ 7 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ - Karavali Times

728x90

20 November 2023

ಡಿಸೆಂಬರ್ 7 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್

ಪುತ್ತೂರು, ನವೆಂಬರ್ 21, 2023 (ಕರಾವಳಿ ಟೈಮ್ಸ್) : ಪುತ್ತೂರು  ಅಂಚೆ   ವಿಭಾಗದ  ತ್ರೈಮಾಸಿಕ  ಅಂಚೆ  ಅದಾಲತ್ ಡಿಸೆಂಬರ್ 7 ರಂದು ಬೆಳಿಗ್ಗೆ 11.30ಕ್ಕೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ  ನಡೆಯಲಿದೆ.

ಅದಾಲತ್ತಿನಲ್ಲಿ ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಕಾರ್ಕಳ ಹಾಗೂ ಹೆಬ್ರಿ  ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು-ಕೊರತೆಗಳನ್ನು, ತಕರಾರುಗಳನ್ನು ಪರಿಶೀಲಿಸಲಾಗುವುದು.

ಸಾರ್ವಜನಿಕರು ಪುತ್ತೂರು ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರಮುಖೇನ “ಅಂಚೆ  ಅದಾಲತ್” ತಲೆ ಬರಹದಡಿ ಡಿ 7ರೊಳಗೆ “ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ, ಪುತ್ತೂರು-574201” ವಿಳಾಸಕ್ಕೆ  ದೂರುಗಳನ್ನು ಕಳುಹಿಸಬಹುದು ಅಥವಾ ಅದೇ ದಿನ ಬೆಳಿಗ್ಗೆ 11.30ರೊಳಗೆ ದೂರವಾಣಿ ಸಂಖ್ಯೆ  08251-230201, 230295 ಸಂಖ್ಯೆಗೂ ನೇರವಾಗಿ ಸಂಪರ್ಕಿಸಬಹುದು. ತಮ್ಮ ದೂರುಗಳನ್ನು ಇಮೇಲ್ ಜoಠಿuಣಣuಡಿ.ಞಚಿ@iಟಿಜiಚಿಠಿosಣ.gov.iಟಿ ಮೂಲಕ ಅದಾಲತ್ತಿಗೆ ಮೊದಲು ತಲುಪುವಂತೆಯೂ ಕಳುಹಿಸಬಹುದು. ಪುತ್ತೂರು ಅಂಚೆ ವಿಭಾಗಕ್ಕೆ ಸಂಬಂಧಿಸಿದ ದೂರುಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಪುತ್ತೂರು ಅಂಚೆ ವಿಭಾಗದ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಡಿಸೆಂಬರ್ 7 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ Rating: 5 Reviewed By: karavali Times
Scroll to Top