ಪುತ್ತೂರು, ನವೆಂಬರ್ 07, 2023 (ಕರಾವಳಿ ಟೈಮ್ಸ್) : ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಮೊಬೈಲಿನಲ್ಲಿ ನಡೆದ ಮಾತಿನ ಚಕಮಕಿ ಬಳಿಕ ದ್ವೇಷಕ್ಕೆ ತಿರುಗಿ ವ್ಯಕ್ತಿಯೋರ್ವರನ್ನು ತಲವಾರಿನಿಂದ ಕಡಿದು ಕೊಲೆಗೈದ ಘಟನೆ ಸೋಮವಾರ ರಾತ್ರಿ ಪುತ್ತೂರು ತಾಲೂಕಿನ ನೆಹರುನಗರದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಪುತ್ತೂರು-ಕಲ್ಲೆಗ ನಿವಾಸಿ, ಕಲ್ಲೆಗ ಟೈಗರ್ಸ್ ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ ಕಲ್ಲೆಗ (24) ಎಂದು ಹೆಸರಿಸಲಾಗಿದೆ. ಕೊಲೆ ಆರೋಪಿಗಳನ್ನು ಪರಿಚಯಸ್ಥರೇ ಆಗಿರುವ ಮನೀಶ್, ಚೇತನ್, ಮಂಜ ಹಾಗೂ ಕೇಶವ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಅಕ್ಷಯ್ ಕೊಲೆಯಾಗುವ ಸಂದರ್ಭ ಜೊತೆಗಿದ್ದು, ಕೊಲೆತಯ್ನದಿಂದ ಪಾರಾಗಿ ಬಂದ ಪುತ್ತೂರು-ಚಿಕ್ಕಮೂಡ್ನೂರು ಗ್ರಾಮದ ನಿವಾಸಿ ವಿಖ್ಯಾತ್ ಬಿ (27) ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೋಮವಾರ (ನ 6) ರಾತ್ರಿ ಪುತ್ತೂರು-ನೆಹರೂನಗರದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ಷಯ ಕಲ್ಲೇಗ ಹಾಗೂ ಆರೋಪಿಗಳಾದ ಮನೀಶ್ ಹಾಗೂ ಚೇತನ್ ಎಂಬವರ ನಡುವೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪ್ರಕರಣ ಮುಂದುವರಿದಂತೆ, ಸ್ವಲ್ಪ ಸಮಯದ ಬಳಿಕ, ನಾನು ತನ್ನ ಗೆಳೆಯನಾದ ಅಕ್ಷಯ್ ಕಲ್ಲೇಗನೊಂದಿಗೆ, ಪುತ್ತೂರು ನೆಹರೂ ನಗರದ ಬಳಿಯಿರುವ ಎಟಿಎಂ ಪಕ್ಕದಲ್ಲಿ ನಿಂತುಕೊಂಡಿದ್ದಾಗ, ಕಾರಿನಲ್ಲಿ ಬಂದ ಆರೋಪಿಗಳಾದ ಚೇತನ್, ಮನೀಶ್, ಮಂಜ ಮತ್ತು ಕೇಶವ ಅವರು ಅಕ್ಷಯ್ ಕಲ್ಲೇಗ ಎಂಬಾತನೊಂದಿಗೆ ದೂರವಾಣಿ ಕರೆಯ ಮೂಲಕ ನಡೆದಿದ್ದ ಮಾತಿನ ಚಕಮಕಿಯ ವಿಚಾರದಲ್ಲಿ ತಕರಾರು ತೆಗೆದು, ಅವ್ಯಾಚವಾಗಿ ಬೈದು, ತಾವುಗಳು ತಂದಿದ್ದ 2 ತಲವಾರಿಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ನಾನು ಓಡಿ ತಪ್ಪಿಸಿಕೊಂಡಿದ್ದು, ಅಕ್ಷಯ ಕಲ್ಲೇಗನನ್ನು ಆರೋಪಿಗಳು ತಲವಾರಿನಿಂದ ಕಡಿದು ಕೊಲೆ ಮಾಡಿ ತೆರಳಿದ್ದಾರೆ ಎಂದು ನೀಡಿದ ದೂರಿನಂತೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2023 ಕಲಂ 341, 504, 506, 307, 302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment