ಪುತ್ತೂರು, ನವೆಂಬರ್ 29, 2023 (ಕರಾವಳಿ ಟೈಮ್ಸ್) : ಪುತ್ತೂರು ಅಂಚೆ ವಿಭಾಗದ ಅರ್ಧ ವಾರ್ಷಿಕ ಪಿಂಚಣಿ ಅದಾಲತ್ ಡಿಸೆಂಬರ್ 7 ರಂದು ಅಪರಾಹ್ನ 2 ಗಂಟೆಗೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ.
ಈ ಅದಾಲತ್ತಿನಲ್ಲಿ ಪುತ್ತೂರು ಅಂಚೆ ವಿಭಾಗದಿಂದ ನಿವೃತ್ತಿ ಹೊಂದಿ ಪಿಂಚಣಿ ಪಡೆಯುವ ಅಂಚೆ ಪಿಂಚಣಿದಾರರ ಕುಂದು ಕೊರತೆಗಳನ್ನು ಪರಿಶೀಲಿಸಲಾಗುವುದು. ಕುಂದು ಕೊರತೆಗಳನ್ನು ಕಳುಹಿಸಲು ಇಚ್ಚಿಸುವ ಅಂಚೆ ಪಿಂಚಣಿದಾರರು ಬರಹ ಮೂಲಕ ಡಿಸೆಂಬರ್ 4 ರೊಳಗೆ ತಲುಪುವಂತೆ “ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು 574201” ಇವರಿಗೆ “`ಪಿಂಚಣಿ ಅದಾಲತ್‍ನಲ್ಲಿ ವಿಚಾರಣೆಗಾಗಿ” ಎಂಬ ಮೇಲ್ಬರಹ ಹೊಂದಿದ ಲಕೋಟೆಯಲ್ಲಿ ಕಳುಹಿಸಬಹುದು. ಡಿಸೆಂಬರ್ 7 ರಂದು 2 ಗಂಟೆಗೆ ಕಚೇರಿಯಲ್ಲಿ ಹಾಜರಿದ್ದರೆ ಸಮಕ್ಷಮ ಪರಿಶೀಲಿಸಲು ಅನುಕೂಲವಾಗುವುದು ಎಂದು ಪುತ್ತೂರು ಅಂಚೆ ಕಚೇರಿಯ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment