ಬಂಟ್ವಾಳ, ನವೆಂಬರ್ 10, 2023 (ಕರಾವಳಿ ಟೈಮ್ಸ್) : ರಸ್ತೆ ದಾಟುತ್ತಿದ್ದ ಮಹಿಳೆಗೆ ಓಮ್ನಿ ಕಾರು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಪಾಣೆಮಂಗಳೂರು ಪೇಟೆಯ ಯೂನಿಯನ್ ಬ್ಯಾಂಕ್ ಬಳಿ ನ 7 ರಂದು ನಡೆದಿದೆ.
ಗಾಯಗೊಂಡ ಮಹಿಳೆಯನ್ನು ನೆಬಿಸಾ (56) ಎಂದು ಹೆಸರಿಸಲಾಗಿದೆ. ನೆಬಿಸ ಅವರು ನ 7 ರಂದು ಮಧ್ಯಾಹ್ನ ಪಾಣೆಮಂಗಳೂರು ಪೇಟೆಯ ಯೂನಿಯನ್ ಬ್ಯಾಂಕ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಪ್ರಶಾಂತ್ ಎಂಬವರು ಚಲಾಯಿಸುತ್ತಿದ್ದ ಓಮ್ನಿ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ರಸ್ತೆಗೆ ಬಿದ್ದು ಗಾಯಗೊಂಡಿದ್ದ ನೆಬಿಸಾ ಅವರು ಬಂಟ್ವಾಳ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿ ವಿಶ್ರಾಂತಿಯಲ್ಲಿದ್ದರು.
ಆದರೆ ನ 9 ರಂದು ಗುರುವಾರ ನೋವು ಉಲ್ಬಣಗೊಂಡ ಹಿನ್ನಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಿ ಕಸ್ಬಾ ನಿವಾಸಿ ಮುಹಮ್ಮದ್ ಮುಸ್ತಫಾ ಅವರು ನೀಡಿದ ದೂರಿನಂತೆ ಶುಕ್ರವಾರ (ನ 10) ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment