ಬೆಳ್ತಂಗಡಿ, ನವೆಂಬರ್ 24, 2023 (ಕರಾವಳಿ ಟೈಮ್ಸ್) : ಗಂಡನ ಸ್ನೇಹಿತ ಮಹಿಳೆಯ ಮೊಬೈಲ್ ಕದ್ದು ಫೋನ್ ಪೇ ಮುಖಾಂತರ ಸಾವಿರಾರು ರೂಪಾಯಿ ಹಣವನ್ನು ಬೇರೆ ಬೇರೆ ವ್ಯಕ್ತಿಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಮಹಿಳೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಆಬಿದಾ ಬಾನು (35) ಎಂಬಾಕೆಯೇ ಗಂಡನ ಸ್ನೇಹಿತ, ಆರೋಪಿ ಸಿದ್ದೀಕ್ ಎಂಬಾತನಿಂದ ವಂಚನೆಗೊಳಗಾದ ಮಹಿಳೆ.
ಆಬಿದಾ ಬಾನು ಅವರ ಪರಿಚಯದ ಸಿದ್ದೀಕ್ ಎಂಬಾತನ ನ 9 ರಂದು ಆಬಿದಾ ಅವರು ಮನೆಯಲ್ಲಿ ಇಲ್ಲದೆ ಇದ್ದ ಸಂದರ್ಭ ಮನೆಯಲ್ಲಿದ್ದ ಸುಮಾರು 8 ಸಾವಿರ ರೂಪಾಯಿ ಮೌಲ್ಯದ ಮೊಬೈಲನ್ನು ಕಳವು ಮಾಡಿಕೊಂಡು ಹೋಗಿದ್ದು, ಬಳಿಕ ಸದ್ರಿ ಮೊಬೈಲಿನಲ್ಲಿನ ಫೋನ್ ಪೇ ಮುಖಾಂತರ ಖಾತೆಯಲ್ಲಿದ್ದ 64 ಸಾವಿರ ರೂಪಾಯಿ 34 ಸಾವಿರ ರೂಪಾಯಿಯನ್ನು ಜಾಫರ್ ಎಂಬಾತನಿಗೂ, 25 ಸಾವಿರ ರೂಪಾಯಿ ಹಣವನ್ನು ಮಹಮ್ಮದ್ ಎಂಬಾತನಿಗೂ ಹಾಗೂ 2 ಸಾವಿರ ರೂಪಾಯಿ ಹಣವನ್ನು ಸಿರಾಜ್ ಎಂಬಾತನಿಗೂ ವರ್ಗಾವಣೆ ಮಾಡಿರುತ್ತಾನೆ.
ಆರೋಪಿಗಳು ಗಂಡನ ಸ್ನೇಹಿತನಾಗಿರುವುದರಿಂದ ಮೊಬೈಲ್ ಮತ್ತು ಹಣವನ್ನು ವಾಪಸು ನೀಡಬಹುದೆಂದು ಆಬಿದಾ ಬಾನು ಕಾದಿದ್ದು, ಇದುವರೆಗೂ ವಾಪಾಸು ನೀಡದಿರುವ ಹಿನ್ನೆಲೆಯಲ್ಲಿ ಗುರುವಾರ ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಂತೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/2023 ಕಲಂ 380, 411 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment