ಬಂಟ್ವಾಳ, ನವೆಂಬರ್ 10, 2023 (ಕರಾವಳಿ ಟೈಮ್ಸ್) : ಬೆಂಗಳೂರಿಗೆ ತೆರಳುವ ಖಾಸಗಿ ಬಸ್ಸನ್ನು ತಡೆದು ಚಾಲಕಗೆ ಮಾಜಿ ಚಾಲಕ ಹಾಗೂ ಕ್ಲೀನರ್ ಸೇರಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಘಟನೆ ಪಾಣೆಮಂಗಳೂರು ಸಮೀಪದ ಮೆಲ್ಕಾರಿನಲ್ಲಿ ಬುಧವಾರ ರಾತ್ರಿ ನಡೆದಿದ್ದು, ಶುಕ್ರವಾರ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಬಸ್ ಚಾಲಕನನ್ನು ಮಂಗಳೂರು-ಕೊಡಿಯಾಲ್ ಬೈಲ್ ನಿವಾಸಿ ಬಶೀರ್ ಅಹ್ಮದ್ (61) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಅದೇ ಬಸ್ಸಿನಲ್ಲಿ ಈ ಹಿಂದೆ ಚಾಲಕರಾಗಿದ್ದ ಬದ್ರುದ್ದೀನ್ ಹಾಗೂ ಕ್ಲೀನರ್ ಆಗಿದ್ದ ಬದ್ರುದ್ದೀನ್ ಎಂದು ಹೆಸರಿಸಲಾಗಿದೆ.
ಬಶೀರ್ ಅಹ್ಮದ್ ಅವರು ಖಾಸಗಿ ಬಸ್ಸಿನಲ್ಲಿ ಕಳೆದ ಒಂದುವರೆ ವರ್ಷದಿಂದ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಸದ್ರಿ ಬಸ್ ನಲ್ಲಿ ದಿನಾಂಕ ನ 8 ರಂದು ರಾತ್ರಿ ಮಣಿಪಾಲದಿಂದ ಹೊರಟು ಬೆಂಗಳೂರು ಕಡೆಗೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಸಂಚರಿಸುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿಗೆ ತಲುಪಿದಾಗ, ಈ ಹಿಂದೆ ಸದ್ರಿ ಬಸ್ಸಿನಲ್ಲಿ ಚಾಲಕನಾಗಿದ್ದ ಬದ್ರುದ್ದೀನ್ ಮತ್ತು ಕ್ಲೀನರ್ ಬದ್ರುದ್ದೀನ್ ಎಂಬವರು ಬಸ್ಸನ್ನು ನಿಲ್ಲಿಸಿ, ಸಂಬಳದ ವಿಚಾರವಾಗಿ ತಕರಾರು ತೆಗೆದು, ಬಶೀರ್ ಅವರಿಗೆ ಅವ್ಯಾಚವಾಗಿ ಬೈದು, ಕೈಯಿಂದ ಹಲ್ಲೆ ನಡೆಸಿರುವುದಲ್ಲದೇ, ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ಶುಕ್ರವಾರ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 135/2023, ಕಲಂ 504, 341, 323, 506 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment