ಬಂಟ್ವಾಳ, ನವೆಂಬರ್ 09, 2023 (ಕರಾವಳಿ ಟೈಮ್ಸ್) : ನಾಯಿ ಅಡ್ಡ ಬಂದು ಬೈಕ್ ರಸ್ತೆಗೆ ಬಿದ್ದು ಸಹಸವಾರ ಗಾಯಗೊಂಡು ಆಸ್ಪತಗ್ರೆ ದಾಖಲಾದ ಘಟನೆ ನಾವೂರು ಗ್ರಾಮದ ಮಣಿಹಳ್ಳ ಎಂಬಲ್ಲಿ ನಡೆದಿದೆ.
ಗಾಯಗೊಂಡ ಸಹಸವಾರನನ್ನು ಪುದು ಗ್ರಾಮದ ನಿವಾಸಿ ಯಾಸೀರ್ ಮೊಹಮ್ಮದ್ ಹನೀಫ್ (22) ಎಂದು ಹೆಸರಿಸಲಾಗಿದೆ. ಹನೀಫ್ ಅವರು ಸವಾರ ಮುಹಮ್ಮದ್ ಶಾಪೀ ಅವರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ನಾವೂರು ಗ್ರಾಮದ ಮಣಿಹಳ್ಳದಲ್ಲಿ ನಾಯಿ ಅಡ್ಡ ಬಂದುದನ್ನು ತಪ್ಪಿಸಲು ಸವಾರ ಶಾಫಿ ಪ್ರಯತ್ನಿಸಿದ ವೇಳೆ ನಿಯಂತ್ರಣ ಮೀರಿ ಬೈಕ್ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಸಹ ಸವಾರ ಯಾಸೀರ್ ಮೊಹಮ್ಮದ್ ಹನೀಫ್ ಗಾಯಗೊಂಡಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಾರ ಶಾಫಿ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment