ಉಪ್ಪಿನಂಗಡಿ, ನವೆಂಬರ್ 28, 2023 (ಕರಾವಳಿ ಟೈಮ್ಸ್) : ಅಕ್ರಮ ಮಾದಕ ವಸ್ತು ಸಾಗಾಟ ಬೇಧಿಸಿದ ಉಪ್ಪಿನಂಗಡಿ ಪೊಲೀಸರು ಮೂವರು ಆರೋಪಿಗಳ ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಸೋಮವಾರ ರಾತ್ರಿ ಉಪ್ಪಿನಂಗಡಿ ಮೆಕ್ಷಿಕೋ ಹೋಟೆಲ್ ಎದುರು ನಡೆದಿದೆ.
ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ನಿವಾಸಿ ಸುಶ್ರುತ ಕೃಷ್ಣ ಜೆ ಕೆ (32), ನೆರಿಯ ಗ್ರಾಮದ ನಿವಾಸಿ ಸೆಬಾಸ್ಟಿಯನ್ (31) ಹಾಗೂ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆ, ತೋಡುಪುಯ ತಾಲೂಕು, ವನ್ನಪುರಂ ನಿವಾಸಿ ಅನಿಲ್ ಥೋಮಸ್ (31) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣಾ ಸಬ್‍ಇನ್ಸ್ ಪೆಕ್ಟರ್ ನೇತೃತ್ವದ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವೆನ್ಯೂ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ವಾಹನದ ಚಾಲಕ ಹಾಗೂ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಲು ಯತ್ನಿಸಿದ ವೇಳೆ ಅವರನ್ನು ಹಿಡಿದ ಪೊಲೀಸರು ವಿಚಾರಣೆ ನಡೆಸಿದಾಗ ಎಂಡಿಎಂಎ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳ ವಾಹನವನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ 45 ಸಾವಿರ ರೂಪಾಯಿ ಮೌಲ್ಯದ 22.4 ಮಿ ಗ್ರಾಂ ತೂಕದ ಎಂಡಿಎಂಎ ಎಂಬ ನಿಷೇಧಿತ ಮಾದಕ ವಸ್ತು ಪತ್ತೆಯಾಗಿದೆ. ಪೊಲೀಸರು ಮಾದಕ ವಸ್ತು ಸಹಿತ ಆರೋಪಿಗಳ ಬಳಿಯಿದ್ದ 3 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment