ಬಂಟ್ವಾಳ, ನವೆಂಬರ್ 09, 2023 (ಕರಾವಳಿ ಟೈಮ್ಸ್) : ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತ ನಡೆದು ಕಾರು ಜಖಂಗೊಂಡು ಚಾಲಕರು ಅಪಾಯದಿಂದ ಪಾರಾದ ಘಟನೆ ಗುರುವಾರ ಬೆಳಿಗ್ಗೆ ಬಂಟ್ವಾಳ ಸಮೀಪದ ಲೊರೆಟ್ಟೊಪದವು ಎಂಬಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹೂಟಗಳ್ಳಿ-ಕೆ ಎಚ್ ಬಿ ಕಾಲೊನಿ ನಿವಾಸಿ ಕೃಷ್ಣ ಅರಸು (49) ಅವರು ಕಾರಿನಲ್ಲಿ ಬರುತ್ತಿದ್ದ ವೇಳೆ ಲೊರೆಟ್ಟೊಪದವು ಎಂಬಲ್ಲಿ ಎದುರಿನಿಂದ ಮೊಹಮ್ಮದ್ ಅಶ್ಫಕ್ ಹುಸೈನ್ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾರು ಭಾಗಶಃ ಜಖಂಗೊಂಡಿದ್ದು, ಯಾರಿಗೂ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment