ಕಡಬ, ನವೆಂಬರ್ 02, 2023 (ಕರಾವಳಿ ಟೈಮ್ಸ್) : ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕೌಕ್ರೌಡಿ ಪಂಚಾಯತ್ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ಮೃತ ಬೈಕ್ ಸವಾರರನ್ನು ಸುರೇಂದ್ರ ಮಹತೋ ಎಂದು ಹೆಸರಿಸಲಾಗಿದೆ. ಲಾರಿ ಚಾಲಕ ಪುತ್ತೂರು ತಾಲೂಕು, ಬಜತ್ತೂರು ನಿವಾಸಿ ಅಬ್ದುಲ್ ರಿಯಾಜ್ ಕೆ ಅವರು ಚಲಾಯಿಸುತ್ತಿದ್ದ ಲಾರಿಗೆ ಬೈಕ್ ಸವಾರ ಅಜಾಗರೂಕತೆಯ ಚಾಲನೆಯ ಮೂಲಕ ಬಂದು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದ ಬೈಕ್ ಸವಾರ ಸುರೇಂದ್ರ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment