ಬಂಟ್ವಾಳ, ನವೆಂಬರ್ 18, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಕಸ್ಬಾ ಗ್ರಾಮದ ನೇರಂಬೋಳು ಬಳಿಯ ಶ್ರೀ ರಕ್ತೇಶ್ವರಿ ಯುವಕ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ಗೌಜಿದ ಲೇಸ್ ಎಂಬ ಕಾರ್ಯಕ್ರಮ ನೇರಂಬೋಳಿನ ಶ್ರೀ ರಕ್ತೇಶ್ವರಿ ಸಭಾಭವನದಲ್ಲಿ ನಡೆಯಿತು.
ಸನಾತನ ಧರ್ಮ ಪ್ರಚಾರಕ ವಿವೇಕ್ ಪೈ ಸತ್ಸಂಗದಲ್ಲಿ ಮಾತನಾಡಿ ಲಕ್ಷ್ಮೀ ಪೂಜೆ ಮಾಡಿದರೆ ಸುಖ ಸುಮೃದ್ಧಿಯಾಗುತ್ತದೆ. ದೀಪಾವಳಿಯ ಸಂದರ್ಭ ಲಕ್ಷ್ಮಿಯ ಆರಾಧನೆ ಮಾಡಬೇಕು. ಈ ಸಂದರ್ಭ ದಾನದರ್ಮವನ್ನೂ ಮಾಡಬೇಕು ಎಂದರು.
ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ನೇರಂಬೋಳು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತುಳು ಸಾಹಿತಿ ಕುವಿಕು ಕಣ್ವತೀರ್ಥ, ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ಜಯಶಂಕರ ಕನ್ಸಾಲೆ, ಉದ್ಯಮಿ ನಾಗೇಶ್ ಸಾಲ್ಯಾನ್, ಭಾರತ ಸೇವಾದಳದ ಅಧ್ಯಕ್ಷ ಸೇಸಪ್ಪ ಮಾಸ್ತರ್, ಕುಂಜಿರ ಗುರುಸ್ವಾಮಿ, ಗೌರವಾಧ್ಯಕ್ಷ ಮನೋಹರ್ ಕುಲಾಲ್ ಮೊದಲಾದವರು ಭಾಗವಹಿಸಿದ್ದರು.
ಪದ್ಮನಾಭ ಪೂಜಾರಿ ಸ್ವಾಗತಿಸಿ, ನವೀನ್ ಪೂಜಾರಿ ವಂದಿಸಿದರು. ರವೀಂದ್ರ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ತುಳುನಾಡಿನ ಆಯ್ದ ಸ್ಥಳೀಯ ಕ್ರೀಡಾಕೂಟ, ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ಮತ್ತು ಮಧ್ಯಾಹ್ನದ ನಂತರ ಸಂಜೀವ ಕಜೆಪದವು ಇವರ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ ಪಾಪಣ್ಣ ವಿಜಯ ಗುಣಸುಂದರಿ ತುಳು ಯಕ್ಷಗಾನ ಬಯಲಾಟ ನಡೆಯಿತು.
0 comments:
Post a Comment