ಬಂಟ್ವಾಳ, ನವೆಂಬರ್ 20, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಆಲಡ್ಕ ಮುಖ್ಯ ರಸ್ತೆಯಲ್ಲಿ ಪುರಸಭಾ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿರುವ ದೃಶ್ಯ ಕಂಡು ಬರುತ್ತಿದೆ. ಹೊಸ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಸಂದರ್ಭ ಇಲ್ಲಿನ ನೀರಿನ ಪೈಪ್ ಒಡೆದು ಹಲವು ದಿನಗಳ ಕಾಲ ಜೀವಜಲ ಪೋಲಾಗುತ್ತಿದ್ದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪುರಸಭಾ ಫ್ಲಂಬರ್ ಇಲ್ಲಿನ ಪೈಪನ್ನು ರಿಪೇರಿ ಮಾಡಿ ತಾತ್ಕಾಲಿಕ ತೇಪೆ ಹಚ್ಚಿದ್ದರು. ಆದರೆ ಈ ತೇಪೆ ಕಾರ್ಯ ಕೆಲವೇ ದಿನಗಳ ಕಾಲ ಮಾತ್ರ ಬಾಳಿಕೆ ಬಂದಿದ್ದು, ಇದೀಗ ಮತ್ತೆ ಪೈಪ್ ಒಡೆದು ನೀರು ಪೋಲಾಗಿ ರಾಜ ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಬೇಸಿಗೆ ಬರುತ್ತಿರುವ ಹೊತ್ತಿನಲ್ಲೇ ಕುಡಿಯುವ ನೀರು ಪೋಲಾಗುತ್ತಿರುವುದು ಮಾತ್ರವಲ್ಲದೆ ರಸ್ತೆಯಲ್ಲೇ ಈ ನೀರು ಹರಿದು ಹೋಗುತ್ತಿರುವುದರಿಂದ ವಾಹನ ಸವಾರರು, ಪಾದಚಾರಿಗಳು ಹಾಗೂ ಅಂಗಡಿದಾರರಿಗೆ ಸಮಸ್ಯೆಯಾಗುತ್ತಿದ್ದು, ತಕ್ಷಣ ಈ ಬಗ್ಗೆ ರಿಪೇರಿ ಕಾರ್ಯ ನಡೆಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
20 November 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment