ವಿಬ್ರ್ಯಾಕ್ ಎನಿಮಲ್ ಹೆಲ್ತ್ ಇಂಡಿಯಾ ಸಂಸ್ಥೆಯ ವತಿಯಿಂದ ಕೊಡಂಗಾಯಿ ಸರಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ - Karavali Times ವಿಬ್ರ್ಯಾಕ್ ಎನಿಮಲ್ ಹೆಲ್ತ್ ಇಂಡಿಯಾ ಸಂಸ್ಥೆಯ ವತಿಯಿಂದ ಕೊಡಂಗಾಯಿ ಸರಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ - Karavali Times

728x90

21 November 2023

ವಿಬ್ರ್ಯಾಕ್ ಎನಿಮಲ್ ಹೆಲ್ತ್ ಇಂಡಿಯಾ ಸಂಸ್ಥೆಯ ವತಿಯಿಂದ ಕೊಡಂಗಾಯಿ ಸರಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಬಂಟ್ವಾಳ, ನವೆಂಬರ್ 21, 2023 (ಕರಾವಳಿ ಟೈಮ್ಸ್) : ಪಶು-ಪಕ್ಷಿಗಳ ಪ್ರಸಿದ್ಧ ಔಷಧಿ ತಯಾರಿಕಾ ಸಂಸ್ಥೆಯಾದ ವಿಬ್ರ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ವತಿಯಿಂದ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಸರಕಾರಿ ಶಾಲೆಗೆ ಸುಮಾರು 85 ಸಾವಿರ ರೂಪಾಯಿ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು. 

ಕಂಪೆನಿಯ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಡಿ ವಿದ್ಯಾರ್ಥಿಗಳ ಆರೋಗ್ಯಪೂರ್ಣ ಬದುಕಿಗಾಗಿ ಈ ಕೊಡುಗೆ ನೀಡಲಾಗಿದೆ. ಪುತ್ತೂರಿನ ಪೆಟ್ ಪ್ಲ್ಯಾನೆಟ್ ವೆಟ್ ಫಾರ್ಮಾ ಮಾಲಕ ಪ್ರವೀಣ್ ರಾಜ್ ಅವರ ಸಹಕಾರದಲ್ಲಿ ನಡೆದ ಹಸ್ತಾಂತರ ಸಮಾರಂಭದಲ್ಲಿ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ್, ಪಶು ಸಂಗೋಪನಾ ವೈದ್ಯಾಧಿಕಾರಿ ಡಾ ಪರಮೇಶ್ವರ್, À ವಿಬ್ರ್ಯಾಕ್ ಕಂಪೆನಿಯ ವಲಯಾಧಿಕಾರಿಗಳಾದ ಪ್ರಜನ್, ಬಸವರಾಜ್, ಕೆ ಜಿ ಅರುಣ್, ಫ್ರೆಂಡ್ಸ್ ಕಾಪುಮಜಲು ಸಂಘಟನೆಯ ಅಧ್ಯಕ್ಷ ವಿನಯ್ ಜೋಗಿ ಕಾಪುಮಜಲು, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಕೆ ಎ ಹಮೀದ್, ಉಪಾಧ್ಯಕ್ಷ ಉಮೇಶ್ ಬಿತ್ತಿಲು, ಶಾಲಾ ಮುಖ್ಯ ಶಿಕ್ಷಕಿ ಲೋಲಾಕ್ಷಿ, ಸಹಾಯಕ ಅಧ್ಯಾಪಕಿ ವಾಣಿಶ್ರೀ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ವಿಬ್ರ್ಯಾಕ್ ಎನಿಮಲ್ ಹೆಲ್ತ್ ಇಂಡಿಯಾ ಸಂಸ್ಥೆಯ ವತಿಯಿಂದ ಕೊಡಂಗಾಯಿ ಸರಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ Rating: 5 Reviewed By: karavali Times
Scroll to Top