ಬಂಟ್ವಾಳ, ನವೆಂಬರ್ 26, 2023 (ಕರಾವಳಿ ಟೈಮ್ಸ್) : ಮನೆಗೆ ಅಕ್ರಮ ಪ್ರವೇಶಗೈದ ಅಪರಿಚಿತ ವ್ಯಕ್ತಿ ಮಹಿಳೆಗೆ ಆಯುಧ ತೋರಿಸಿ ಚಿನ್ನಾಭರಣ ದರೋಡೆಗೈಯಲು ಯತ್ನಿಸಿದ ಘಟನೆ ತಾಲೂಕಿನ ಕುಳ ಗ್ರಾಮದ ಬಗ್ಗುಮೂಲೆ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಗ್ಗುಮೂಲೆ ನಿವಾಸಿ ಮಹಮ್ಮದ್ ಶಾಕೀರ್ (19) ಎಂಬವರು ಠಾಣೆಗೆ ದೂರು ನೀಡಿದ್ದು, ಇವರ ಅಜ್ಜಿ ಆಸಿಯಮ್ಮ ಅವರು ಶನಿವಾರ ಬೆಳಿಗ್ಗೆ ಮನೆಯಲ್ಲಿದ್ದ ಸಮಯ ಅಪರಿಚಿತ ವ್ಯಕ್ತಿ ಮನೆಗೆ ಮುಂಭಾಗದಿಂದ ಅಕ್ರಮವಾಗಿ ಒಳ ಪ್ರವೇಶಿಸಿ, ಬಾಗಿಲು ಹಾಕಿ ನೇರ ಅಡುಗೆ ಕೋಣೆಯ ಬಳಿ ಇದ್ದ ಆಸಿಯಮ್ಮ ಅವರ ಬಳಿಗೆ ಬಂದು, ತನ್ನಲ್ಲಿದ್ದ ಆಯುಧವನ್ನು ಅಜ್ಜಿಗೆ ತೋರಿಸಿ, ಅವರ ಶರೀರದಲ್ಲಿರುವ ಚಿನ್ನಾಭರಣವನ್ನು ನೀಡುವಂತೆ ಬೆದರಿಕೆ ಹಾಕಿರುತ್ತಾನೆ. ಈ ಸಂದರ್ಭ ಆಸಿಯಮ್ಮ ಅವರು ಕಿರುಚಾಡಿದ್ದಾರೆ. ಕಿರುಚಾಟ ಕೇಳಿ ನೆರೆ ಕರೆಯವರು ಬರುತ್ತಿದ್ದಂತೆ ಅಪರಿಚಿತ ವ್ಯಕ್ತಿ ಮನೆಯ ಹಿಂಭಾಗದಿಂದ ಓಡಿ ಪರಾರಿಯಾಗಿರುತ್ತಾನೆ ಎಂದು ದೂರಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 198/2023 ಕಲಂ 448, 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment