ದಾರಿ ವಿಚಾರವಾಗಿ ಮಹಿಳೆಯರ ನಡುವೆ ಚಕಮಕಿ, ಜಾತಿ ನಿಂದನೆ ಆರೋಪ : ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ದಾರಿ ವಿಚಾರವಾಗಿ ಮಹಿಳೆಯರ ನಡುವೆ ಚಕಮಕಿ, ಜಾತಿ ನಿಂದನೆ ಆರೋಪ : ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

5 November 2023

ದಾರಿ ವಿಚಾರವಾಗಿ ಮಹಿಳೆಯರ ನಡುವೆ ಚಕಮಕಿ, ಜಾತಿ ನಿಂದನೆ ಆರೋಪ : ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ನವೆಂಬರ್ 05, 2023 (ಕರಾವಳಿ ಟೈಮ್ಸ್) : ದಾರಿಯ ವಿಚಾರವಾಗಿ ಮಾತನಾಡಲು ತೆರಳಿದ ಆರು ಮಂದಿ ಮಹಿಳೆಯರಿಗೆ ಮನೆಯಲ್ಲಿದ್ದ ಆರೋಪಿಗಳಾದ ತಾಯಿ-ಮಗಳು ಸೇರಿ ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿದ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಬಂಟ್ವಾಳ ಸಮೀಪದ ಅಜ್ಜಿಬೆಟ್ಟು ನಿವಾಸಿ ಶ್ವೇತಾ (19) ಅವರು ಠಾಣೆಗೆ ದೂರು ನೀಡಿದ್ದು, ಭಾನುವಾರ ಬೆಳಿಗ್ಗೆ ದಾರಿಯ ವಿಚಾರವಾಗಿ, ಈ ಹಿಂದೆ ನಡೆದಿದ್ದ ತಕರಾರಿನ ಬಗ್ಗೆ ವಿಚಾರಿಸುವರೇ, ತನ್ನ ಸಂಬಂಧಿಕರಾದ ಸುಚಿತ್ರಾ, ಚೈತ್ರಾ, ಪವಿತ್ರಾ, ಸಂದ್ಯಾ, ಪ್ರತಿಮಾ ಎಂಬವರೊಂದಿಗೆ, ಪ್ರಕರಣದ ಆರೋಪಿತೆಯಾದ ಜಯಂತಿ ಅವರ ಮನೆಗೆ ತೆರಳಿದ್ದೆವು. ಈ ವೇಳೆ ಜಯಂತಿ ಅವರ ತಾಯಿ ಪ್ರೇಮಾ ಅವರು ಕೂಡಾ ಮನೆಯಲ್ಲಿದ್ದರು. ನಾವು ಪ್ರೇಮಾ ಹಾಗೂ ಜಯಂತಿ ಅವರಲ್ಲಿ ಈ ಹಿಂದೆ ದಾರಿಯಲ್ಲಿ ಹೋಗುವಾಗ ಬೈದಿರುವುದನ್ನು ಪ್ರಶ್ನಿಸುತ್ತಿದ್ದಂತೆ, ಪ್ರೇಮಾ ಹಾಗೂ ಜಯಂತಿ ಅವರು ನಮಗೆಲ್ಲರಿಗೂ ಅವ್ಯಾಚವಾಗಿ ಬೈದು, ಜಾತಿ ನಿಂದನೆ ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ದಾರಿ ವಿಚಾರವಾಗಿ ಮಹಿಳೆಯರ ನಡುವೆ ಚಕಮಕಿ, ಜಾತಿ ನಿಂದನೆ ಆರೋಪ : ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top