ಮಂಗಳೂರು, ನವೆಂಬರ್ 19, 2023 (ಕರಾವಳಿ ಟೈಮ್ಸ್) : ಇಂದು ದೇಶದ ಆಡಳಿತ ಪ್ಯಾಶಿಸ್ಟರ ಕೈಯಲ್ಲಿದ್ದು ಈ ದೇಶವನ್ನು ಪ್ಯಾಶಿಸ್ಟರ ಕೈಯಿಂದ ರಕ್ಷಿಸಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಒಗ್ಗಟ್ಟಾಗಿ ಬಿಜೆಪಿ ಪಕ್ಷವನ್ನು ಸೋಲಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಸಿಪಿಐಎಂಎಲ್ ಲಿಬರೇಷನ್ ಪಾಲಿಟ್ ಬ್ಯೂರೋ ಸದಸ್ಯ ಕಾಮ್ರೇಡ್ ಶಂಕರ್ ಕರೆ ನೀಡಿದರು.
ಮಂಗಳೂರಿನಲ್ಲಿ ಭಾನುವಾರ ನಡೆದ ಭಾರತ ಕಮ್ಯೂನಿï್ಟ ಪಕ್ಷ (ಮಾರ್ಕ್ಸ್ ವಾದಿ, ಲೆನಿನ್ ವಾದಿ) ಲಿಬರೇಷನ್ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ಯಾಶಿಸ್ಟ್ ಶಕ್ತಿಗಳನ್ನು ಎದುರಿಸಲು ಸೈದಾಂತಿಕ ಸ್ಪಷ್ಟತೆ ಇರುವ ಕಮ್ಯೂನಿಸ್ಟರಿಂದ ಮಾತ್ರ ಸಾದ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ಯಾಶಿಷ್ಟ್ ಶಕ್ತಿಗಳನ್ನು ಮಟ್ಟಹಾಕಲು ಸಿಪಿಐಎಂಎಲ್ ಪಕ್ಷವನ್ನು ಬಲಿಷ್ಠಗೊಳಿಸುವಂತೆ ವಿನಂತಿಸಿದರು.
ಕಾಮ್ರೇಡ್ ರಾಮಣ್ಣ ವಿಟ್ಲ ಪಕ್ಷವನ್ನು ಜಿಲ್ಲೆಯಲ್ಲಿ ಬಲಿಷ್ಠ ಗೊಳಿಸುವ ಬಗ್ಗೆ ಮಾರ್ಗದರ್ಶನ ನೀಡಿದರು. ಸಮ್ಮೇಳನದ ಅದ್ಯಕ್ಷೀಯ ಮಂಡಳಿಯಾಗಿ ಕಾಮ್ರೇಡ್ ಮೋಹನ್ ಕೆ ಇ, ಸತೀಶ್ ಕುಮಾರ್, ಭರತ್ ಕುಮಾರ್, ಮಾರ್ಟಿನ್ ಬೆಳ್ತಂಗಡಿ, ತುಳಸೀದಾಸ್ ವಿಟ್ಲ ಕಾರ್ಯನಿರ್ವಹಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ಮೋಹನ್ ಕೆ ಇ ಸ್ವಾಗತಿಸಿ, ಪ್ರಸ್ತಾವನೆಗೈದರು. ತುಳಸೀದಾಸ್ ವಿಟ್ಲ ಕರಡು ವರದಿ ಮಂಡಿಸಿದರು.
ಇದೇ ವೇಳೆ ಪಕ್ಷದ ನೂತನ ಜಿಲ್ಲಾ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಪಕ್ಷದ ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ಕಾಮ್ರೇಡ್ ರಾಮಣ್ಣ ವಿಟ್ಲ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಕಾಮ್ರೇಡ್ ಕೆ ಇ, ಮೋಹನ್ ಮಂಗಳೂರು, ಸತೀಶ್ ಕುಮಾರ್ ಮಂಗಳೂರು, ಭರತ್ ಕುಮಾರ್ ಮಂಗಳೂರು, ಮಾರ್ಟಿನ್ ಬೆಳ್ತಂಗಡಿ, ನಾಗೇಶ್ ಕೈರಂಗಳ, ಮಹಾವೀರ್ ಜೈನ್ ಪುತ್ತೂರು, ಅಶ್ರಫ್ ಕೊಯಿಲ, ಸಜೇಶ್ ವಿಟ್ಲ, ತುಳಸೀದಾಸ್ ವಿಟ್ಲ, ಅಶ್ವಿನ್ ಮಂಗಳೂರು, ನಂದನ್ ಮಂಗಳೂರು, ಪ್ರದೀಪ್ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಪಕ್ಷದ ರಾಜ್ಯ ಸಮ್ಮೇಳನ ಡಿಸೆಂಬರ್ 9 ಮತ್ತು 10 ರಂದು ರಾಯಚೂರು ಜಿಲ್ಲೆಯ ಸಿಂದನೂರಿನಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ 22 ಮಂದಿ ಪ್ರತಿನಿಧಿಗಳನ್ನು ಆಯ್ಕೆಮಾಡಲಾಯಿತು.
0 comments:
Post a Comment