ಧರ್ಮಸ್ಥಳ, ನವೆಂಬರ್ 29, 2023 (ಕರಾವಳಿ ಟೈಮ್ಸ್) : ಚಿಕ್ಕಮಗಳೂರು ನಿವಾಸಿ ಒಣಮೆಣಸು ಮಾರಾಟಗಾರನ ದ್ವಿಚಕ್ರ ವಾಹನ ಕಳವುಗೈದ ಘಟನೆ ಧರ್ಮಸ್ಥಳ ಸ್ನಾನಘಟ್ಟದ ಬಳಿ ಇರುವ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕುರುಬರ ಬೂದಿಹಾಳ ಗ್ರಾಮದ ನಿವಾಸಿ ಕೆ ಟಿ ಕೃಷ್ಣ ಶೆಟ್ಟಿ (54) ಅವರು ತನ್ನ ಬೈಕಿನಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ ಒಣಮೆಣಸು ಮಾರಾಟ ಮಾಡುತ್ತಿದ್ದು, ಎಂದಿನಂತೆ ಒಣಮೆಣಸು ಮಾರಾಟ ಮಾಡಿದ ಬಳಿಕ ಧರ್ಮಸ್ಥಳ ಸ್ನಾನಘಟ್ಟದ ಬಳಿ ಇರುವ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಸ್ನಾನ ಮಾಡಲು ನದಿಗೆ ತೆರಳಿದ್ದರು. ಸ್ನಾನ ಮುಗಿಸಿದ ಬಳಿಕ ಪಾರ್ಕಿಂಗ್ ಸ್ಥಳದಲ್ಲಿ ಬಂದು ನೋಡಿದಾಗ ಬೈಕ್ ಕಳವಾಗಿರುವುದು ಗಮನಕ್ಕೆ ಬಂದಿದೆ. ಕಳವಾಗಿರುವ ಬೈಕಿನ ಅಂದಾಜು ಮೌಲ್ಯ 30 ಸಾವಿರ ರೂಪಾಯಿ ಆಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬೈಕ್ ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
0 comments:
Post a Comment