ಬಂಟ್ವಾಳ, ನವೆಂಬರ್ 25, 2023 (ಕರಾವಳಿ ಟೈಮ್ಸ್) : ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ ಕಸ್ಬಾ ಗ್ರಾಮದ ತುಂಬ್ಯ ಜಂಕ್ಷನ್ ಸಮೀಪದ ಅಟೋ ರಿಕ್ಷಾ ಪಾರ್ಕ್ ಬಳಿ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ.
ಗಾಯಾಳುಗಳನ್ನು ದ್ವಿಚಕ್ರ ವಾಹನ ಸವಾರ ಸ್ಥಳೀಯ ನಿವಾಸಿ ಸುಜನ್ (20) ಹಾಗೂ ಸಹಸವಾರ ಕಿರಣ್ ರಾಜ್ ಎಂದು ಹೆಸರಿಸಲಾಗಿದೆ.
ಸುಜನ್ ತನ್ನ ದ್ವಿಚಕ್ರ ವಾಹನದಲ್ಲಿ ಕಿರಣ್ ರಾಜ್ ಅವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ವೇಳೆ ಬಂಟ್ವಾಳ ಸಮೀಪದ ತುಂಬ್ಯ ಜಂಕ್ಷನ್ ಹತ್ತಿರದ ರಿಕ್ಷಾ ಪಾರ್ಕ್ ಬಳಿ ಗೋಪಾಲ ಸಪಲ್ಯ ಎಂಬವರು ಚಲಾಯಿಸಿಕೊಂಡು ಬಂದ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದು, ಸವಾರ ಸುಜಿತ್ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಹಾಗೂ ಸಹಸವಾರ ಕಿರಣ್ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ದುಡುಕುತನವೇ ಅಪಘಾತಕ್ಕೆ ಕಾರಣ ಎಂದು ದೂರಲಾಗಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment