ಸಂಪ್ಯ ರಿಫಾಯಿಯ ದಫ್ ತಂಡದ ಮಾಜಿ ದಫ್ ಕಲಾವಿದ ಆಸಿಫ್ ಸಂಪ್ಯ
ದುಬೈ, ನವೆಂಬರ್ 16, 2023 (ಕರಾವಳಿ ಟೈಮ್ಸ್) : ಜಿಡಿಆರ್‍ಎಎಫ್‍ಎ-ದುಬೈ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡುವ ಗೋಲ್ಡನ್ ವೀಸಾ ಸೌಲಭ್ಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಪ್ಯ-ಉದಯಗಿರಿ ನಿವಾಸಿ ದಿವಂಗತ ಸುಲೈಮಾನ್ ಅವರ ಪುತ್ರ, ದುಬೈಯ ಅನಿವಾಸಿ ಉದ್ಯಮಿ ಆಸಿಫ್ ಉದಯಗಿರಿ ಅವರು ಪಡೆದುಕೊಂಡಿದ್ದಾರೆ.
ಕಳೆದ 9 ವರ್ಷಗಳಿಂದ ದುಬೈಯ ಹಲವು ಸಂಸ್ಥೆಗಳಲ್ಲಿ ಉದ್ಯೋಗ ನಿಭಾಯಿಸಿ ಪ್ರಸ್ತುತ ಬೇ ಬೈಟ್ಸ್ ಸಂಸ್ಥೆಯಲ್ಲಿ ಮ್ಯಾನೇಜಿಂಗ್ ಪಾಟ್ರ್ನರ್ ಆಗಿ ಕೆಲಸ ನಿರ್ವಹಿಸುತ್ತಿರುವ ಇವರು ಇದೀಗ ಯುಎಇ ಸರಕಾರದಿಂದ ಮುಂದಿನ 10 ವರ್ಷಗಳ ಮಾನ್ಯತೆಯೊಂದಿಗೆ ವಿವಿಧ ಸೌಲಭ್ಯ ಹೊಂದಿರುವ ಗೋಲ್ಡನ್ ವೀಸಾ ಸೌಲಭ್ಯ ಪಡೆದಿರುತ್ತಾರೆ.
ಸಂಪ್ಯ ಎಸ್.ಕೆ.ಎಸ್.ಬಿ.ವಿ. ಹಾಗೂ ಎನ್.ಎಚ್.ವೈ.ಎ. ಇದರ ಮಾಜಿ ಕಾರ್ಯದರ್ಶಿಯಾಗಿ, ಸಂಪ್ಯ ರಿಫಾಯಿಯ ದಫ್ ಸಮಿತಿಯ ದಫ್ ವಿಧ್ಯಾರ್ಥಿಯಾಗಿ, ಅತ್ಯುತ್ತಮ ನಿರ್ವಹಣೆ ಮೂಲಕ ಸಂಪ್ಯ ದಫ್ಫ್ ತಂಡವನ್ನು ಜಿಲ್ಲೆಯಾದ್ಯಂತ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಆಸಿಫ್ ಸಂಪ್ಯ ಅವರು ಸಂಪ್ಯ ಜುಮಾ ಮಸೀದಿ ಖತೀಬ್ ಹಮೀದ್ ದಾರಿಮಿ ಅವರ ಶಿಷ್ಯರಾಗಿದ್ದಾರೆ.
ಆಸಿಫ್ ಸಂಪ್ಯ ಅವರು ಗೋಲ್ಡನ್ ವೀಸಾ ಸೌಲಭ್ಯ ಪಡೆದಿರುವ ಕರ್ನಾಟಕದ ಕೆಲವೇ ವ್ಯಕ್ತಿಗಳ ಪಟ್ಟಿಯಲ್ಲಿ ಸಂಪ್ಯ ನಿವಾಸಿಗೆ ಲಭಿಸಿರುವುದು ಊರ ನಾಗರಿಕರು ಹೆಮ್ಮೆಪಡುವಂತಾಗಿದೆ.
0 comments:
Post a Comment