ಬಂಟ್ವಾಳ, ನವೆಂಬರ್ 22, 2023 (ಕರಾವಳಿ ಟೈಮ್ಸ್) : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಪಿತಾಮಹ, ಬಂಟ್ವಾಳ ಸಮೀಪದ ಅಗ್ರಾರ್-ಪೊನ್ನಂಗಿಲ ನಿವಾಸಿ ಆಲ್ಬರ್ಟ್ ವಲೇರಿಯನ್ ರೋಡ್ರಿಗಸ್ (87) ಅವರು ಮಂಗಳವಾರ (ನ 21) ಮಧ್ಯಾಹ್ನ ವಯೋ ಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅಗ್ರಾರ್ ಚರ್ಚಿನ ಪಾಲನಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಇವರು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ, ಪುತ್ರರಾದ ಪಿಯೂಸ್ ಲೆವಿನ್ ರೋಡ್ರಿಗಸ್, ಆರ್ಥರ್ ರಾಜೇಶ್ ರೋಡ್ರಿಗಸ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆಯು ಗುರುವಾರ (ನ 23) ಸಂಜೆ 3.30 ಕ್ಕೆ ಮನೆಯಿಂದ ಹೊರಟು 4 ಗಂಟೆಗೆ ಪೂಜೆ ಬಲಿದಾನದೊಂದಿಗೆ ಅಗ್ರಾರ್ ಹೋಲಿ ಕ್ಸೇವಿಯರ್ ಚರ್ಚಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇವರ ನಿಧನಕ್ಕೆ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಸಹಿತ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
0 comments:
Post a Comment