ಸುಳ್ಯ, ಅಕ್ಟೋಬರ್ 12, 2023 (ಕರಾವಳಿ ಟೈಮ್ಸ್) : ಏರ್ ಲೈನ್ಸ್ ಕಂಪೆನಿಯಲ್ಲಿ ಉತ್ತಮ ಸಂಬಳ, ಇತರ ಸೌಲಭ್ಯಗಳ ಸಹಿತ ಉದ್ಯೋಗ ನೀಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಸುಳ್ಯ ತಾಲೂಕು, ಅಮರಪಡ್ನೂರು ಗ್ರಾಮದ ನಿವಾಸಿ ಯಶ್ವಿನಿ ಕೆ ಬಿ ಅವರು ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಶ್ವಿನಿ ಅವರಿಗೆ ಕಳೆದ ಜುಲೈ 7 ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು Vistara Airlines , Singapore Branch, Devanahalli Bangalore ಎಂಬ ಸಂಸ್ಥೆಯಿಂದ ಕರೆ ಮಾಡುತ್ತಿದ್ದು, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿಯಿದ್ದು, ಈ ಉದ್ಯೋಗದಲ್ಲಿ ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ನೀಡುವುದಾಗಿ ತಿಳಿಸಿರುತ್ತಾನೆ. ಸದರಿ ಉದ್ಯೋಗವನ್ನು ತಮಗೆ ನೀಡುವುದಾಗಿ ತಿಳಿಸಿ, ಯಶ್ವಿನಿ ಅವರಿಂರ ಹಂತ ಹಂತವಾಗಿ ವಿವಿಧ ನೆಪಗಳನ್ನು ಹೇಳಿ ಒಟ್ಟು 13,00,997/- ರೂಪಾಯಿ ಗಳನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ಈವರೆಗೆ ಉದ್ಯೋಗ ನೀಡದೇ ಮೋಸ ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿಅಪರಾಧ ಕ್ರಮಾಂಕ 67/2023 ಕಲಂ 419, 420 ಐಪಿಸಿ ಮತ್ತು ಕಲಂ 66(ಡಿ) ಐಟಿ ಆಕ್ಟ್ ನಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡಸುತ್ತಿದ್ದಾರೆ.
0 comments:
Post a Comment