ಬಂಟ್ವಾಳ, ಅಕ್ಟೋಬರ್ 13, 2023 (ಕರಾವಳಿ ಟೈಮ್ಸ್) : ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಫಾರ್ ಕೋ-ಆಪರೇಟಿವ್ ಟ್ರೈನಿಂಗ್ (ಎನ್.ಸಿ.ಸಿ.ಟಿ) ಇದರ ಅಂಗ ಸಂಸ್ಥೆ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ.) ಬೆಂಗಳೂರು ವತಿಯಿಂದ ಪಡೀಲಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಮನ್ವಯತೆಯಲ್ಲಿ ಮಂಗಳೊರು ಕೇಂದ್ರವಾಗಿಸಿಕೊಂಡು ನಡೆಸಿದ ಸಹಕಾರ ಉನ್ನತ ಡಿಪ್ಲೊಮಾ (ಎಚ್.ಡಿ.ಸಿ.ಎಂ.) ಕೋರ್ಸಿನ ದೂರ ಶಿಕ್ಷಣ ಪರೀಕ್ಷೆಯಲ್ಲಿ ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಬೆಂಜನಪದವು ಶಾಖೆಯ ಶಾಖಾಧಿಕಾರಿ ಅತಿಶಯ ಹೆಗ್ದೆ ಅವರು 2022-2023ನೇ ಬ್ಯಾಚಿನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಪ್ರತೀ ಬ್ಯಾಚಿನಲ್ಲಿ 100ಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ಭಾಗವಹಿಸಿದ್ದು, ಈ ಬ್ಯಾಚಿನಲ್ಲಿ 105 ಶಿಕ್ಷಣಾರ್ಥಿಗಳು ಎಚ್ ಡಿ ಸಿ ಎಂ 53, 54 ಮತ್ತು 57ನೇ ಅಧಿವೇಶನದಲ್ಲಿ ಪರೀಕ್ಷೆ ಬರೆದಿದ್ದರು. 12 ಶಿಕ್ಷಣಾರ್ಥಿಗಳು ಉನ್ನತ ಶ್ರೇಣಿ, 61 ಶಿಕ್ಷಣಾರ್ಥಿಗಳು ಪ್ರಥಮ ದರ್ಜೆ ಹಾಗೂ 18 ಶಿಕ್ಷಣಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತೀರ್ಣರಾಗುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಹೆಸರುಗಳಿಸುವಂತೆ ಮಾಡಿದ್ದಾರೆ.
0 comments:
Post a Comment