ಬಂಟ್ವಾಳ, ಅಕ್ಟೋಬರ್ 30, 2023 (ಕರಾವಳಿ ಟೈಮ್ಸ್) : ಅಪಾರ್ಟ್ ಮೆಂಟ್ ವೊಂದರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ರೂಪಾಯಿ ನಗದು ಹಣ ಕಳವುಗೈದು ಪರಾರಿಯಾದ ಘಟನೆ ಬಿ ಸಿ ರೋಡಿನಲ್ಲಿ ಭಾನುವಾರ ನಡೆದಿದೆ.
ಬಿ ಸಿ ರೋಡಿನ ಗೆಲಾಕ್ಸಿ ಅಪಾರ್ಟ್ ಮೆಂಟಿನ ನಿವಾಸಿ ವೀಕ್ಷಿತ್ ಅವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ. ವೀಕ್ಷಿತ್ ಅವರು ಭಾನುವಾರ ಬೆಳಿಗ್ಗೆ ಮನೆಗೆ ಬೀಗ ಹಾಕಿ ಕೀಯನ್ನು ಬಾಗಿಲ ಸಮೀಪ ಇಟ್ಟು ಅಗತ್ಯ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿತ್ತು. ಮನೆಯ ಬೀಗ ಹಾಗೂ ಅದರ ಕೀ ಮನೆಯೊಳಗಿನ ಸೋಫಾ ಮೇಲಿತ್ತು. ಮನೆಯ ಕಪಾಟಿನ ಬೀಗ ತೆರೆಯಲಾಗಿತ್ತು. ಒಳಗೆ ಪರಿಶೀಲನೆ ನಡೆಸಿದಾಗ ಕಪಾಟಿನಲ್ಲಿದ್ದ ಸುಮಾರು 3.40 ಲಕ್ಷ ರೂಪಾಯಿ ಮೌಲ್ಯದ 67 ಗ್ರಾಂ ಚಿನ್ನಾಭರಣ ಹಾಗೂ 5 ಸಾವಿರ ರೂಪಾಯಿ ನಗದು ಹಣ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment