ಬಂಟ್ವಾಳ, ಅಕ್ಟೋಬರ್ 29, 2023 (ಕರಾವಳಿ ಟೈಮ್ಸ್) : ತಾಲೂಕಿನ ಸರಪಾಡಿ ನಿವಾಸಿ ವಸಂತ ಸಾಲಿಯಾನ್ ಅವರ ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಕಳವು ಮಾಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪುಷ್ಪಲತಾ ಹಾಗೂ ಇತರ ಕೆಲಸಗಾರರು ಶುಕ್ರವಾರ ರಾತ್ರಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಮರದಿಂದ ಸುಮಾರು 4-5 ಕ್ವಿಂಟಾಲ್ ಅಡಿಕೆ ಕೊಯ್ದು ಕದ್ದುಕೊಂಡು ಹೋಗಿದ್ದಾರೆ. ವಸಂತ ಸಾಲಿಯಾನ್ ಅವರ ಮನೆ ಜಮೀನಿಗೆ ಸ್ವಲ್ಪ ದೂರದಲ್ಲಿರುವುದರಿಂದ ಆರೋಪಿಗಳು ಇದನ್ನು ಸದುಪಯೋಗಪಡಿಸಿಕೊಂಡು ಕಳವು ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಡಿಕೆ ಕಳ್ಳತನದಿಂದ ತೋಟದ ಮಾಲಿಕ ವಸಂತ ಸಾಲಿಯಾನ್ ಅವರಿಗೆ ಸುಮಾರು 2.5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2023 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment