ಬಂಟ್ವಾಳ, ಅಕ್ಟೋಬರ್ 08, 2023 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಓರ್ವ ಗಾಯಗೊಂಡ ಘಟನೆ ಬಿ ಮೂಡ ಗ್ರಮದ ತಲಪಾಡಿ ರೈಸ್ ಮಿಲ್ ಬಳಿ ನಡೆದಿದೆ.
ಗಾಯಗೊಂಡ ಪ್ರಯಾಣಿಕನನ್ನು ಶನವಾಝ್ ಆಲಂ ಎಂದು ಹೆಸರಿಸಲಾಗಿದೆ. ಗಾಯಾಳುವಿನ ಪತ್ನಿ ಜಮೀಲಾ ಚಲಾಯಿಸುತ್ತಿದ್ದ ಅಟೋ ರಿಕ್ಷಾ ನಿಯಂತ್ರಣ ಮೀರಿ ರಸ್ತೆ ಬದಿಯ ಡಿವೈಡರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ರಿಕ್ಷಾದಲ್ಲಿದ್ದ ಚಾಲಕಿಯ ಪತಿ ಶನವಾಝ್ ಆಲಂ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment