ಸುಳ್ಯ, ಅಕ್ಟೋಬರ್ 22, 2023 (ಕರಾವಳಿ ಟೈಮ್ಸ್) : ತಾಲೂಕಿನ ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳ ನಿವಾಸಿ ಎಂ ಮೋಹನದಾಸ ಅವರ ಮನೆಯಲ್ಲಿ 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ಶನಿವಾರ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮೋಹನ್ ದಾಸ್ ಅವರು ಸುಳ್ಯ ಪೊಲೀಸರಿಗೆ ಶನಿವಾರ (ಅ 21) ದೂರು ನೀಡಿದ್ದು, ಮೋಹನ್ ದಾಸ್ ಅವರು ಅ 9 ರಂದು ತಮ್ಮ ಹೆಂಡತಿಯೊಂದಿಗೆ ಖಾಸಗಿ ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿ ತೆರಳಿದ್ದು, ಅ 20 ರಂದು ಪತ್ನಿಯೊಂದಿಗೆ ಹಾಸನದಲ್ಲಿರುವ ಮಗಳ ಮನೆಯಲ್ಲಿರುವಾಗ, ಸುಳ್ಯದಲ್ಲಿರುವ ಮನೆಯ ಬಾಗಿಲು ಅಲ್ಪ ಪ್ರಮಾಣದಲ್ಲಿ ತೆರೆದಿರುವ ಬಗ್ಗೆ ಸ್ಥಳೀಯರಿಂದ ಬಂದ ಮಾಹಿತಿಯಾಧರಿಸಿ ಮನೆಗೆ ಬಂದು ನೋಡಿದಾಗ ಮನೆಯ ಎದುರು ಬಾಗಿಲನ್ನು ಯಾರೋ ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯೊಳಗೆ ಪ್ರವೇಶಿಸಿ ಕೋಣೆಯಲ್ಲಿದ್ದ ಅಂದಾಜು 15,13,391/- ರೂಪಾಯಿ ಮೌಲ್ಯದ ಒಟ್ಟು 363.34 ಗ್ರಾಂ ಚಿನ್ನಾಭರಣಗಳನ್ನು ಕಳುವುಗೈದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2023 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment