ಪುತ್ತೂರು, ಅಕ್ಟೋಬರ್ 26, 2023 (ಕರಾವಳಿ ಟೈಮ್ಸ್) : ಮನೆಯ ಸಿಟೌಟ್ ಮೇಲ್ಛಾವಣಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ಕಾರ್ಮಿಕ ಮೃತಪಟ್ಟು, ಕಂಟ್ರಾಕ್ಟರ್ ಗಾಯಗೊಂಡ ಘಟನೆ ಪುತ್ತೂರು ತಾಲೂಕು, ಅರಿಯಡ್ಕ ಗ್ರಾಮದ, ಪಾದಲಾಡಿ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಮೃತ ಕಾರ್ಮಿಕನನ್ನು ಅರಿಯಡ್ಕ ಗ್ರಾಮದ ನಿವಾಸಿ ಶೇಖರ ಕುಲಾಲ್ (45) ಹಾಗೂ ಗಾಯಗೊಂಡ ಕಂಟ್ರಾಕ್ಟರ್ ನನ್ನು ಸಂಜೀವ ಮೊಗೇರ ಎಂದು ಹೆಸರಿಸಲಾಗಿದೆ.
ಅರಿಯಡ್ಕ ಗ್ರಾಮದ ಪಾದಲಾಡಿ ನಿವಾಸಿ ಕಮಲ ಎಂಬವರ ಮನೆಯ ಸೀಟೌಟಿನ ಮೇಲ್ಛಾವಣಿಯ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಘಟನೆಯಿಂದ ಶೇಖರ ಕುಲಾಲ್ ಹಾಗೂ ಸಂಜೀವ ಮೊಗೇರ ಅವರು ಗಾಯಗೊಂಡಿದ್ದು, ಈ ಪೈಕಿ ಗಂಭೀರ ಗಾಯಗೊಂಡಿದ್ದ ಶೇಖರ ಕುಲಾಲ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಗೆ ಸರಿಯಾಗಿ ಕ್ಯೂರಿಂಗ್ ಆಗದಿರುವ ಸ್ಥಳದಲ್ಲಿ ಕೆಲಸ ಮಾಡುವುದು ಜೀವಕ್ಕೆ ಅಪಾಯ ಎಂದು ತಿಳಿದಿದ್ದರೂ ಕೂಡಾ ಶೇಖರ್ ಕುಲಾಲ್ ಅವರನ್ನು ಕೆಲಸ ಮಾಡಿಸಿದ ಕಾಂಟ್ರ್ಯಾಕ್ಟರ್ ಸಂಜೀವ ಮೊಗೇರ ಹಾಗೂ ಮನೆ ಮಾಲಿಕರಾದ ಕಮಲ ಅವರ ನಿರ್ಲಕ್ಷ್ಯತನವೇ ಕಾರಣ ಎಂದು ಮೃತ ಶೇಖರ ಕುಲಾಲ್ ಅವರ ಸಹೋದರ ದಿನೇಶ್ ಕುಲಾಲ್ ನೀಡಿದ ದೂರಿನಂತೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 103/2023 ಕಲo 304(A) IPC ಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment