ಬಂಟ್ವಾಳ, ಅಕ್ಟೋಬರ್ 11, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಎಸ್ ವಿ ಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ ಪಿ ಏಕನಾಥ್ ಭಟ್ (91) ಅವರು ವಯೋಸಹಜ ಅನಾರೋಗ್ಯದಿಂದ ಮುಂಬಯಿಯ ದೈಸರ್ ಸುದೀಂದ್ರನಗರದಲ್ಲಿರುವ ಮಗನ ಮನೆಯಲ್ಲಿ ಮಂಗಳವಾರ (ಅಕ್ಟೋಬರ್ 10) ನಿಧನರಾಗಿದ್ದಾರೆ.
ಏಕನಾಥ ಭಟ್ ಅವರು ಪಾಣೆಮಂಗಳೂರು ಎಸ್ ವಿ ಎಸ್ ಶಾಲೆಯಲ್ಲಿ ಸುಮಾರು 40 ವರ್ಷಗಳ ಕಾಲ ಸುರ್ದೀಘ ಅವಧಿಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಬಳಿಕ ನಿವೃತ್ತರಾಗಿದ್ದರು. ಹಾರ್ಮೋನಿಯಂ ವಾದಕರಾಗಿದ್ದ ಇವರು ಉತ್ತಮ ಕಲಾವಿದರೂ ಆಗಿದ್ದರು. ಎಸ್ ವಿ ಎಸ್ ಶಾಲೆಯಲ್ಲಿ ನಡೆಯುತ್ತಿದ್ದ ಶ್ರೀ ಶಾರದಾ ಪೂಜಾ ಮಹೋತ್ಸವ ಸಂದರ್ಭ ಇವರು ಮಕ್ಕಳಿಂದ ನಾಟಕಗಳನ್ನು ಮಾಡಿಸಿ ಸೇವೆ ಸಲ್ಲಿಸುತ್ತಿದ್ದರಲ್ಲದೆ ಪಾಣೆಮಂಗಳೂರು ಶ್ರೀ ವೀರ ವಿಠಲ ದೇವಸ್ಥಾನದ ಮ್ಯಾನೇಜರ್ ಆಗಿ ಸುಮಾರು 51 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಮೃತರು ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment