ಬಂಟ್ವಾಳ, ಅಕ್ಟೋಬರ್ 15, 2023 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರು ಎಂಬಲ್ಲಿ ಕಳೆದ ಸೆ 23 ರಂದು ನಡೆದ ಪಿಕ್ ಅಪ್ ವಾಹನ ಕಳವು ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಕೇರಳ ರಾಜ್ಯದ ನಿವಾಸಿಗಳಾದ ರಂಷನ್ ಅಲಿಯಾಸ್ ಸಾನು, ಜುನ್ಸಿಫ್, ನೌಫಲ್, ಹಂಸಕ್, ತಬ್ರಿಜ, ಮೊಹಮ್ಮದ್ ಉಸೈನ್, ಹ್ಯಾರಿಸ್ ಹಾಗೂ ಮೊಹಮ್ಮದ್ ಅಯೂಬ ಖಾನ್ ಎಂದು ಗುರುತಿಸಲಾಗಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
0 comments:
Post a Comment