ಬಂಟ್ವಾಳ, ಅಕ್ಟೋಬರ್ 31, 2023 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನಕ್ಕೆ ಅಟೋ ರಿಕ್ಷಾ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ಕಾವಳಪಡೂರು ಗ್ರಾಮದ ಮದ್ದ ಎಂಬಲ್ಲಿ ಸಂಭವಿಸಿದೆ.
ಗಾಯಾಳು ದ್ವಿಚಕ್ರ ವಾಹನ ಸವಾರರನ್ನು ಕಾವಳಪಡೂರು ನಿವಾಸಿ ಮೊಹಮ್ಮದ್ ಹನೀಫ್ (34) ಎಂದು ಹೆಸರಿಸಲಾಗಿದೆ. ಹನೀಫ್ ಅವರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಮದ್ದ ಎಂಬಲ್ಲಿ ಪ್ರಭಾಕರ ನಾಯಕ್ ಎಂಬವರು ಚಲಾಯಿಸುತ್ತಿದ್ದ ಅಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ದ್ವಿಚಕ್ರ ವಾಹನ ಸಹಿತ ರಸ್ತೆಗೆಸೆಯಲ್ಪಟ್ಟ ಹನೀಫ್ ಅವರು ಗಾಯಗೊಂಡಿದ್ದು, ಅವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment