ಬಂಟ್ವಾಳ, ಅಕ್ಟೋಬರ್ 25, 2023 (ಕರಾವಳಿ ಟೈಮ್ಸ್) : ಹಝ್ರತ್ ಗುಲಾಂ ಮುಹಮ್ಮದ್ ಅಹ್ಮದ್ ಮೌಲಾ (ಖ.ಸಿ.) ಮಹಾನುಭಾವರ 146ನೇ ಆಂಡ್ ನೇರ್ಚೆ ಕಾರ್ಯಕ್ರಮವು ಅಕ್ಟೋಬರ್ 28 ರಂದು ಶನಿವಾರ ಬಿ ಸಿ ರೋಡು ಸಮೀಪದ ಮಿತ್ತಬೈಲಿನ ನಕ್ಷಬಂಧೀ ನಗರದ ಮಿತ್ತಬೈಲು ಉಸ್ತಾದ್ ಮನೆಯಲ್ಲಿ ನಡೆಯಲಿದೆ.
ಸುಬುಹಿ ನಮಾಝ್ ಬಳಿಕ ಮಿತ್ತಬೈಲು ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ ಪೈವಳಿಕೆ ಅವರ ನೇತೃತ್ವದಲ್ಲಿ ಕೂಟು ಝಿಯಾರತ್, ಬೆಳಿಗ್ಗೆ 6 ಗಂಟೆಗೆ ಮಿತ್ತಬೈಲು ಖತೀಬ್ ಅಶ್ರಫ್ ಫೈಝಿ ಕೊಡಗು ಅವರ ನೇತೃತ್ವದಲ್ಲಿ ಖತಮುಲ್ ಕುರ್-ಆನ್, ಬೆಳಿಗ್ಗೆ 10 ಗಂಟೆಗೆ ಶರಫುದ್ದೀನ್ ಫೈಝಿ ಕಿಲ್ತಾನ್ ದ್ವೀಪ ಅವರ ನೇತೃತ್ವದಲ್ಲಿ ಹಖೀಖತ್ ಮಾಲ ಆಲಾಪನೆ, ಇಶಾ ನಮಾಝಿನ ನಂತರ ಶೈಖುನಾ ಬೊಳ್ಳೂರು ಉಸ್ತಾದ್ ನೇತೃತ್ವದಲ್ಲಿ ನಕ್ಷಬಂಧೀ ಮೌಲಿದ್ ಹಾಗೂ ದುವಾ ಮಜ್ಲಿಸ್ ಕಾರ್ಯಕ್ರಮ, ರಾತ್ರಿ 9 ರಿಂದ ತಬರ್ರುಕ್ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಇರ್ಶಾದ್ ದಾರಿಮಿ ಅಲ್-ಜಝರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment