ಬಂಟ್ವಾಳ, ಅಕ್ಟೋಬರ್ 05, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡು ಬಸ್ಸು ನಿಲ್ದಾಣದ ಬಳಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಬಸ್ಸು ಹತ್ತುತ್ತಿದ್ದ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸಿದ ಘಟನೆ ಬುಧವಾರ ನಡೆದಿದೆ.
ಬುಧವಾರ ಬೆಳಿಗ್ಗೆ ಬಿ ಸಿ ರೋಡು ಬಸ್ಸು ನಿಲ್ದಾಣ ಬಳಿ ಮಂಗಳೂರು ಕಾಲೇಜಿಗೆಂದು ತೆರಳಲು ಬಂದ ವಿದ್ಯಾರ್ಥಿನಿ ಬಸ್ಸು ಹತ್ತುತ್ತಿದ್ದ ವೇಳೆ ಹಿಂದಿನಿಂದ ಬಂದ ಆರೋಪಿ ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಆತನಲ್ಲಿ ವಿಚಾರಿಸಿದಾಗ ಮುಂದೆಯು ಹೀಗೆ ಮಾಡುತ್ತೇನೆ ನೀನು ಏನು ಮಾಡುತ್ತೀಯಾ ಎಂದು ಹೆದರಿಸಿರುತ್ತಾನೆ. ಬಳಿಕ ವಿದ್ಯಾರ್ಥಿನಿ ಬಸ್ಸಿನಲ್ಲಿ ಮಂಗಳೂರು ಬಳ್ಳಾಲ ಭಾಗ್ ಬಸ್ ನಿಲ್ದಾಣ ತಲುಪಿದಾಗ, ಇಬ್ಬರು ವ್ಯಕ್ತಿಗಳು ಬಂದು ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಕರೆದುಕೊಂಡು ಹೋಗಿರುತ್ತಾರೆ ಎಂದು ವಿದ್ಯಾರ್ಥಿನಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ 354(ಎ), 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
0 comments:
Post a Comment