ಬಂಟ್ವಾಳ, ಅಕ್ಟೋಬರ್ 12, 2023 (ಕರಾವಳಿ ಟೈಮ್ಸ್) : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಲಾಗಿದೆ ಎಂದು ಎರಡು ಪಾರ್ಟಿಗಳು ಪರಸ್ಪರ ದೂರು-ಪ್ರತಿದೂರು ದಾಖಲಿಸಿದ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ.
ಈ ಬಗ್ಗೆ ಪಾಣೆಮಂಗಳೂರು ಗ್ರಾಮದ ನಿವಾಸಿ ಸಿಲ್ವಿಯ ಫೆರ್ನಾಂಡಿಸ್ (40) ಎಂಬವರು ದೂರು ನೀಡಿದ್ದು, ತನ್ನ ಪತಿ ವಿದೇಶದಲ್ಲಿದ್ದು, ತನ್ನ ಮಗಳೊಂದಿಗೆ ಮನೆಯಲ್ಲಿ ವಾಸ್ತವ್ಯವಿರುವುದಾಗಿದೆ. ಆರೋಪಿ ಮನೋಜ್ ಎಂಬಾತ ಅಕ್ಟೋಬರ್ 12 ರಂದು ಗುರುವಾರ ಬೆಳಿಗ್ಗೆ ಮನೆಯಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜಮೀನನ್ನು ತನ್ನ ಹೆಸರಿಗೆ ದಾಖಲಿಸಿ ಕೊಡದಿದ್ದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 115/2023 ಕಲಂ 447, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ದೂರು ನೀಡಿರುವ ಪಾಣೆಮಂಗಳೂರು ಗ್ರಾಮದ ನಿವಾಸಿ ಮನೋಜ್ (25 ) ಅವರು, ಅಕ್ಟೋಬರ್ 12 ರಂದು ಗುರುವಾರ ಬೆಳಿಗ್ಗೆ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ಇದೆ ಎಂದು ಹೇಳಿದ ಆರೋಪಿಗಳಾದ ನತಾಲಿಯ ಫೆರ್ನಾಂಡಿಸ್, ಜಾನ್ ಫೆರ್ನಾಂಡಿಸ್, ಸಿಲ್ವಿಯ ಫೆರ್ನಾಂಡಿಸ್ ಎಂಬವರು ತಮ್ಮ ಮನೆ ಬಳಿ ಕರೆಸಿ, ಜಮೀನು ವಿಚಾರದಲ್ಲಿ ಮಾತನಾಡಿ, ಬಳಿಕ ಕೈಯಿಂದ ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/2023 ಕಲಂ 323, 355, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment