ಬಂಟ್ವಾಳ, ಅಕ್ಟೋಬರ್ 12, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಸಹಿತ ಸಿಡಿಲಾಘಾತಕ್ಕೆ ಮನೆ ಹಾನಿ ಪ್ರಕರಣಗಳು ಮುಂದುವರಿದಿದ್ದು, ತಾಲೂಕಿನ ಬಡಗ ಕಜೆಕಾರು ಗ್ರಾಮದ ಕೆಡಿಮೇಲೂ ಮನೆ ನಿವಾಸಿ ನೊಣಯ್ಯ ಬಿನ್ ದೂಜ ಅವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ ಆಗಿರುತ್ತದೆ.
ನಾವೂರು ಗ್ರಾಮದ ಅಂಬೇಡ್ಕರ್ ಕಾಲನಿ ನಿವಾಸಿ ಭಾರತಿ ಕೋಂ ಸತೀಶ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ ಎಂದು ತಾಲೂಕು ಕಚೇರಿ ಮಾಹಿತಿ ತಿಳಿಸಿದೆ.
0 comments:
Post a Comment