ಬಂಟ್ವಾಳ, ಅಕ್ಟೋಬರ್ 11, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡು ಬಸ್ ನಿಲ್ದಾಣದ ಮುಂಭಾಗದ ನಿಂತಿದ್ದ ವ್ಯಕ್ತಿಗೆ ಪರಿಚಯದ ವ್ಯಕ್ತಿಯೇ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಬಿ ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಮಹಮ್ಮದ್ ಫಾಯಿಝ್ (23) ಎಂಬವರಿಗೆ ಪರಿಚಯದ ಕೆವಿನ್ ರೋಡ್ರಿಗಸ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಫಾಯಿಝ್ ಅವರು ಪೊಲೀಸರಿಗೆ ದೂರು ನೀಡಿದ್ದು, ನಾನು ಅ 4 ರಂದು ಬಸ್ ನಿಲ್ದಾಣ ಮುಂಭಾಗ ನಿಂತಿದ್ದ ವೇಳೆ ಪರಿಚಯದ ಕೆವಿನ್ ರೋಡ್ರೀಗಸ್ ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಎದೆಗೆ ಮತ್ತು ಕಣ್ಣಿಗೆ ಹೊಡೆದು, ಏನು ಗುರಾಯಿಸುತ್ತಿದ್ದೀಯಾ ಎಂದು ಹೇಳಿ, ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಪರಾರಿಯಾಗಿರುತ್ತಾನೆ ಎಂದು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/2023 ಕಲಂ 504, 323, 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment