ಬಂಟ್ವಾಳ, ಸೆಪ್ಟೆಂಬರ್ 28, 2023 (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಟಾಡಿ ಗ್ರಾಮದ ನಿವಾಸಿ ಗಿಲ್ಬರ್ಟ್ ಮಿನೇಜಸ್ ಅವರ ಜಾಗಕ್ಕೆ ಅಕ್ರಮ ಪ್ರವೇಶಿಸಿ ಕಂಪೌಂಡ್ ಗೋಡೆ ನಾಶ ಮಾಡಿ ಗುಂಡಿ ತೋಡಿದ ಬಗ್ಗೆ 10 ಮಂದಿಯ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಗಿಲ್ಬರ್ಟ್ ಮೆನೇಜಸ್ ಅವರು ಗುರುವಾರ ಠಾಣೆಗೆ ದೂರು ನೀಡಿದ್ದು, ಅಮ್ಡಾಡಿ ಗ್ರಾಮದಲ್ಲಿರುವ ತನ್ನ ಜಾಗದಲ್ಲಿ ಆರೋಪಿತರಾದ ರೀಟಾ ಆಗ್ನೇಶ್ ಫಿಲೋಮಿನಾ ಮಿನೇಜಸ್, ವಿಲಿಯಂ ಮಿನೇಜಸ್, ಸೂರಜ್ ಡೇನಿಯಲ್ ಮಿನೇಜಸ್, ಪ್ರಕಾಶ್ ಪಾವುಲ್ ಲಾಲ್ವಿನ್ ಮಿನೇಜಸ್, ಸರೂಜ್ ಮತ್ತು ಅವರ ಸಂಬಂಧಿಕರಾದ ಕಂಟ್ರಾಕ್ಟರ್, ಇಬ್ಬರು ಗಂಡಸರು ಮತ್ತು ಇಬ್ಬರು ಹೆಂಗಸರು ಅಕ್ರಮ ಕೂಟ ಸೇರಿಕೊಂಡು ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ನೂರಾರು ವರ್ಷದ ಹಳೆಯದಾದ ಕಲ್ಲು ಮತ್ತು ಮಣ್ಣಿನ ಕಂಪೌಂಡ್ ಗೋಡೆಯನ್ನು ನಾಶ ಮಾಡಿ, ಗುಂಡಿಯನ್ನು ತೋಡಿ ಕಲ್ಲಿನಲ್ಲಿ ಹೊಸ ಗೋಡೆಯನ್ನು ಕಟ್ಟುತ್ತಿರುವುದಾಗಿದೆ. ಕಾಂಟ್ರಾಕ್ಟರ್ ಹಾಗೂ ಅವನ ಸಂಬಂಧಿಕರುಗಳು ಗಿಲ್ಬರ್ಟ್ ಮಿನೇಜಸ್ ಅವರಿಗೆ ವಾಟ್ಸಪ್ ಮತ್ತು ಪೆÇೀನ್ ಕರೆಗಳ ಮೂಲಕ ಕರೆ ಮಾಡಿ ಜೀವ ಬೇದರಿಕೆಯನ್ನು ಹಾಕಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2023, ಕಲಂ 143, 147, 447, 427, 506 ಜೊತೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment