ಬಂಟ್ವಾಳ, ಸೆಪ್ಟೆಂಬರ್ 04, 2023 (ಕರಾವಳಿ ಟೈಮ್ಸ್) : ಮನೆಗೆ ಅಕ್ರಮ ಪ್ರವೇಶ ಮಾಡಿದ ನೆರೆಕರೆ ನಿವಾಸಿ ಅವಾಚ್ಯವಾಗಿ ಬೈದು ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಮೇರಮಜಲು ಗ್ರಾಮದ ನಿವಾಸಿ ದಯಾನಂದ ಅವರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ದಯಾನಂದ ಹಾಗೂ ಅವರ ಪತ್ನಿಗೆ ರೇಶನ್ ಅಕ್ಕಿ ವಿಚಾರದಲ್ಲಿ ಪದೇ ಪದೇ ಸಹಜ ಜಗಳವಾಗುತ್ತಿದ್ದು, ಈ ಬಗ್ಗೆ ನೆರೆಯ ಶೇಷಪ್ಪ ಎಂಬವರ ಪುತ್ರ ಆರೋಪಿ ಸಂತೋಷ ಎಂಬಾತ ದಯಾನಂದ ಅವರಿಗೆ ಆಗಾಗ ಅವಾಚ್ಯವಾಗಿ ಬೈಯುತ್ತಿರುತ್ತಾನೆ. ಇದರ ಮುಂದುವರಿದ ಭಾಗವಾಗಿ ಶನಿವಾರ ರಾತ್ರಿ ದಯಾನಂದ ಮನೆಯಲ್ಲಿದ್ದ ವೇಳೆ ಆರೋಪಿ ಸಂತೋಷನು ಏಕಾಎಕಿ ಕೈಯಲ್ಲಿ ಮರದ ದೊಣ್ಣೆಯನ್ನು ಹಿಡಿದುಕೊಂಡು ದಯಾನಂದ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು, ಮರದ ದೊಣ್ಣೆಯಿಂದ ಹಲ್ಲೆ ನಡೆಸಿರುವುದಲ್ಲದೆ ಜೀವ ಬೆದರಿಕೆ ಹಾಕಿ ತೆರಳಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡ ದಯಾನಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ದಯಾನಂದ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2023 ಕಲಂ 448, 504, 323, 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment